ಸಂಧ್ಯಾ ಚಿಬ್ ಜನುಮ ದಿನ
- 1976.
- ಬೆಂಗಳೂರು ಮೂಲದ ಮಾಡೆಲ್.
- 1996ರಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ವಿಜೇತೆ. ಅದೇ ವರ್ಷ ಭುವನ ಸುಂದರಿ ಸ್ಪರ್ಧೆಯ ಟಾಪ್ 10 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
- ಭುವನ ಸುಂದರಿ ಸ್ಪರ್ಧೆ ಸಮಯದಲ್ಲೇ ಯುಎಸ್ನಲ್ಲಿ ನೆಲೆಸಿದ್ದ ಅನೂಪ್ ಜಾಕೋಬ್ ಜತೆ ಪ್ರೇಮಾಂಕುರ.
ಪುಣ್ಯತಿಥಿ
ಮಿಖಾಯಿಲ್ ಮಧುಸೂದನ ದತ್
- 1824-1873.
- ಬೆಂಗಾಲಿ ಕವಿ, ನಾಟಕಕಾರ.
- ಬೆಂಗಾಲಿ ಸಾಹಿತ್ಯದಲ್ಲಿ 'ಬೆಂಗಾಲಿ ಸುನೀತಗಳ ಜನಕ' ಎಂದು ಗೌರವಿಸಲಾಗುತ್ತದೆ.
- ಹಿಂದೂ ಕುಟುಂಬದಲ್ಲಿ ಜನನ. ತಾರುಣ್ಯದಲ್ಲಿ ಕ್ರೈಸ್ತ ಧರ್ಮದತ್ತ ಆಕರ್ಷಿತರಾಗಿದ್ದರು.
ದಿನಚರಿತೆ
- 1950- ಫಿಫಾ ವರ್ಲ್ಡ್ಕಪ್ನಲ್ಲಿ ಇಂಗ್ಲೆಂಡ್ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಯುನೈಟೆಡ್ ಸ್ಟೇಟ್ಸ್.
- 2002- ದಕ್ಷಿಣ ಕೊರಿಯಾ-ಉತ್ತರ ಕೊರಿಯಾ ನಡುವೆ ನೌಕಾ ಯುದ್ಧ. ತನ್ನ 6 ಯೋಧರನ್ನು ಕಳೆದುಕೊಂಡರೂ ಉತ್ತರ ಕೊರಿಯಾದ ನೌಕೆ ಮುಳುಗಿಸುವಲ್ಲಿ ದಕ್ಷಿಣ ಕೊರಿಯಾ ಯಶಸ್ವಿ.
- 2007- ಆ್ಯಪಲ್ ತನ್ನ ಮೊದಲ ಮೊಬೈಲ್ ಫೋನ್ 'ಐಫೋನ್' ಮಾರುಕಟ್ಟೆಗೆ ಬಿಡುಗಡೆ ಮಾಡಿತು.
ಟ್ವೀಟ್ಸ್ಟಾಲ್
ಸಿನಿಮಾ ಎಂದರೆ ಮನರಂಜನೆ ಅಷ್ಟೇ ಅಲ್ಲ. ಅದರ ಪ್ರತಿ ಫ್ರೇಂ ಕೂಡ ಏನನ್ನೋ ಧ್ವನಿಸುತ್ತಿರುತ್ತದೆ. ಪ್ರತಿ ದೃಶ್ಯದಲ್ಲಿ ಏನೋ ತಿರುಳು ಇರುತ್ತದೆ.
-ರಾಬರ್ಟ್ ಡಿ. ನಿರೊ