ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ವಯಂ ಸೇವಕರಿವರು

ಗೃಹರಕ್ಷಕ ದಳ ಅರ್ಥಾತ್ ಹೋಂ ಗಾರ್ಡ್ಸ್. ಇವರು ಸ್ವಯಂ ಸೇವಕರು. ಇದು ಸ್ವಯಂ ಸೇವಕರ ಸಂಸ್ಥೆ...

Rashmi Kasaragodu
Updated On : 28 Jun 2013, 3:17 am

ಗೃಹರಕ್ಷಕ ದಳ ಅರ್ಥಾತ್ ಹೋಂ ಗಾರ್ಡ್ಸ್. ಇವರು ಸ್ವಯಂ ಸೇವಕರು. ಇದು ಸ್ವಯಂ ಸೇವಕರ ಸಂಸ್ಥೆ.
ಯಾವುದೇ ಸ್ವಾರ್ಥ, ಉದ್ದೇಶ, ಸಂಬಳ ಇಲ್ಲದೆ ಈ ಸಿಬ್ಬಂದಿ ಸಾರ್ವಜನಿಕರ ಸೇವೆ ಮಾಡುತ್ತಾರೆ. ಇವರು ಒಂದು ರೀತಿ ಪೊಲೀಸರಿದ್ದಂತೆ. ಆದರೆ, ಸರ್ಕಾರಿ ನೌಕರರಲ್ಲ. ಅಗ್ನಿಶಾಮಕದಳ, ಸಿವಿಲ್ ಡಿಫೆನ್ಸ್ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ಒಬ್ಬರೇ ಪೊಲೀಸ್ ಮಹಾನಿರ್ದೇಶಕರ ಕೈಕೆಳಗೆ ಇವರು ಕೆಲಸ ನಿರ್ವಹಿಸುತ್ತಾರೆ.
ಗೃಹರಕ್ಷಕ ದಳದ ಸಿಬ್ಬಂದಿ ರಾಜ್ಯಾದ್ಯಂತ ಕೆಲಸ ನಿರ್ವಹಿಸುತ್ತಿದ್ದು, ತುರ್ತು ಪರಿಸ್ಥಿತಿ ಅಥವಾ ಅಗತ್ಯಬಿದ್ದಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಾಯ ಮಾಡುತ್ತಾರೆ. ಜನರಿಗೆ ಭದ್ರತೆ ನೀಡುತ್ತಾರೆ.
ಅಲ್ಲದೆ, ಸಾಕಷ್ಟು ಖಾಸಗಿ ಕಂಪನಿಗಳು, ಬ್ಯಾಂಕ್‌ಗಳು, ಶಾಲಾಕಾಲೇಜುಗಳಲ್ಲಿ ಇವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಸೂಚನೆಯಂತೆ ಅಗತ್ಯಬಿದ್ದಾಗ ಪೊಲೀಸರಿಗೆ ಸಹಾಯ ಮಾಡುತ್ತಾರೆ.
ಕರ್ತವ್ಯಕ್ಕೆ ಕರೆಸಿಕೊಳ್ಳವ ಕಂಪನಿ, ಇಲಾಖೆಯಿಂದ ಇವರಿಗೆ ಪ್ರತಿ ದಿನಕ್ಕೆ ರು. 300 ಸಂಬಳ ನೀಡುತ್ತಾರೆ. ಆದರೆ, ಜಿಲ್ಲಾಮಟ್ಟದಲ್ಲಿ ದಿನಗೂಲಿ ಕಡಿಮೆ ಇರುತ್ತದೆ. ಕೆಲಸ ಇಲ್ಲದ ವೇಳೆ ಅವರಿಗೆ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. ವಾರಕ್ಕೊಮ್ಮೆ ಗೃಹರಕ್ಷಕ ದಳದ ಮುಖ್ಯಕಚೇರಿಯಲ್ಲಿ ತರಬೇತಿ ನೀಡಲಾಗುತ್ತದೆ.


-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement