ಬೈಟುಕಾಫಿ

ಅಶ್ವಿನಿ ವೈದ್ಯ

ಮದುವೆಯಾಗಿ ನಾಲ್ಕೈದು ವರ್ಷಗಳಾದರೂ ಮಕ್ಕಳಾಗಲಿಲ್ಲ ಎಂದಾದರೆ ಅಂಥ ದಂಪತಿ ತಕ್ಷಣಕ್ಕೆ ನೆನಪಿಸಿಕೊಳ್ಳುವುದು ಡಾ.ಬಿ.ಟಿ. ರುದ್ರೇಶ್ ಅವರನ್ನು. ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿರುವ ಅಶ್ವಿನಿ ಹೋಮಿಯೋ ಕ್ಲಿನಿಕ್ನಲ್ಲಿ ಅವರ ಭೇಟಿಗಾಗಿ ನಿತ್ಯ ಏನಿಲ್ಲವೆಂದರೂ 150-200 ಜನ ಕಾದಿರುತ್ತಾರೆ. ಅವರೆಲ್ಲ ಎರಡು ತಿಂಗಳು ಮೊದಲೇ ಭೇಟಿಗೆ ಸಮಯ ನಿಗದಿಪಡಿಸಿಕೊಂಡವರು. ಹೆಚ್ಚಿನವರ ತೊಂದರೆ ಸಂತಾನದ್ದೇ.
32 ವರ್ಷಗಳಿಂದ ಪ್ರಾಕ್ಟೀಸ್ ನಡೆಸುತ್ತಿರುವ ರುದ್ರೇಶ್ ಸಂತಾನ ಸಮಸ್ಯೆ ಇರುವವರಿಗಷ್ಟೇ ಚಿಕಿತ್ಸೆ ನೀಡುವುದಿಲ್ಲ. ಶೀತದಿಂದ ಕ್ಯಾನ್ಸರ್ವರೆಗೆ ಎಲ್ಲ ಕಾಯಿಲೆಗಳಿಗೂ ಅವರಲ್ಲಿ ಮದ್ದುಂಟು. 15 ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಖ್ಯಾತರಾದದ್ದು ಮಾತ್ರ 'ಸಂತಾನ ಶಕ್ತಿ ನೀಡುವ ಡಾಕ್ಟರ್' ಎಂದೇ. ಈವರೆಗೆ ತಮ್ಮ ದಾಖಲೆಗಳ ಪ್ರಕಾರ 2,000 ಸ್ತ್ರೀಯರಿಗೆ ತಾಯ್ತನದ ಭಾಗ್ಯ ಸಿಕ್ಕಿದೆ. ಇದು ಚಿಕಿತ್ಸೆ ನಂತರ 'ನಾವು ಮಕ್ಕಳನ್ನು ಪಡೆದಿದ್ದೇವೆ' ಎಂದು ತಿಳಿಸಿದವರ ಸಂಖ್ಯೆ. ವಾಸ್ತವದಲ್ಲಿ ಚಿಕಿತ್ಸೆಯ 'ಫಲ' ಪಡೆದವರು ನಾಲ್ಕು ಸಾವಿರಕ್ಕೂ ಹೆಚ್ಚು ಜನ ಎನ್ನುತ್ತಾರೆ ರುದ್ರೇಶ್.
'ಬೇರೆ ಕಾಯಿಲೆಗಳಿಗೆ ಔಷಧ ಪಡೆದವರು ಇತರರ ಬಳಿ ಹೇಳಿಕೊಳ್ಳುವುದಿಲ್ಲ. ಸಂತಾನ ಎನ್ನುವುದು ಸಾಮಾಜಿಕ ಸ್ಥಾನಮಾನ, ಪ್ರತಿಷ್ಠೆ. ಮಕ್ಕಳನ್ನು ಹೆತ್ತರೇನೇ ಹೆಣ್ತನಕ್ಕೆ ಪರಿಪೂರ್ಣತೆ ಎನ್ನುವ ಭಾವನೆ ನಮ್ಮ ಸಮಾಜದಲ್ಲಿದೆ. ಆದ್ದರಿಂದಲೇ ಅದು ಎಲ್ಲರಿಗೂ ಗೊತ್ತಾಗುತ್ತದೆ. ಬಹುಶಃ ಈ ಕಾರಣದಿಂದಾಗಿಯೇ ರುದ್ರೇಶ್ ಎಂದರೆ ಬಂಜೆತನ ನಿವಾರಿಸುವ ಡಾಕ್ಟರ್ ಎಂದು ಖ್ಯಾತನಾಗಿರುವುದು' ಎಂದು ಅಭಿಪ್ರಾಯಪಡುತ್ತಾರೆ 'ಅಶ್ವಿನಿ' ವೈದ್ಯ.
ಅಶ್ವಿನಿ ಕ್ಲಿನಿಕ್ನ ದೂರವಾಣಿ: (080) 26797575.



ಸಮಾಜದ ಎಲ್ಲ ಸ್ತರದ, ಎಲ್ಲ ರೀತಿಯ ಕೆಲಸ ಮಾಡುವ ಮಂದಿ ನನ್ನಲ್ಲಿ ಬರುತ್ತಾರೆ. ವೈದ್ಯನಾಗಿ ನನಗೆ ಎಲ್ಲರೂ ಸಮಾನರು. ವೈದ್ಯ ತನ್ನ ವೃತ್ತಿಯಲ್ಲಿ ಯಶಸ್ಸು ಗಳಿಸಬೇಕಿದ್ದರೆ ಆತ ಸೂಕ್ಷ್ಮಪ್ರಜ್ಞೆ ಉಳ್ಳವನಾಗಿರಬೇಕು. ರೋಗಿಗಳ ಮನಗೆದ್ದು ರೋಗ ಪತ್ತೆ ಮಾಡುವ ಪತ್ತೇದಾರನಾಗಿರಬೇಕು.
- ಡಾ.ಬಿ.ಟಿ. ರುದ್ರೇಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್