ನಯನ ಬ್ರಹ್ಮ
ಉತ್ತರ ಕರ್ನಾಟಕ ಭಾಗದಲ್ಲಿ ಡಾ.ಎಂ.ಎಂ. ಜೋಶಿ ಎಂಬ ಹೆಸರು ಚಿರಪರಿಚಿತ. 'ನಯನ ಬ್ರಹ್ಮ' ಎಂದೇ ಇವರ ಖ್ಯಾತಿ. ವೃತ್ತಿಯಲ್ಲಿ ಶ್ರದ್ಧೆ, ನಿಷ್ಠೆ, ಉತ್ತಮ...
ಉತ್ತರ ಕರ್ನಾಟಕ ಭಾಗದಲ್ಲಿ ಡಾ.ಎಂ.ಎಂ. ಜೋಶಿ ಎಂಬ ಹೆಸರು ಚಿರಪರಿಚಿತ. 'ನಯನ ಬ್ರಹ್ಮ' ಎಂದೇ ಇವರ ಖ್ಯಾತಿ. ವೃತ್ತಿಯಲ್ಲಿ ಶ್ರದ್ಧೆ, ನಿಷ್ಠೆ, ಉತ್ತಮ ಹಸ್ತಗುಣ ಹೊಂದಿರುವ ಇವರು ವೃತ್ತಿಯ ಆರಾಧಕ, ಕರ್ಮಯೋಗಿ.
ಸಾರ್ವಜನಿಕ ಕೆಲಸಗಳಿಗೆ ಸದಾಕಾಲ ಸ್ಪಂದಿಸುತ್ತ ಯಾವಾಗಲೂ ಹಳ್ಳಿಗರು ಕಡುಬಡವರಿಗೆ ಸಮಯೋಚಿತ ಚಿಕಿತ್ಸೆ ನೀಡಿದ್ದೇ ಜೋಶಿ ಖ್ಯಾತಿಗೆ ಕಾರಣ. ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಸಾವಿರಾರು ನೇತ್ರಗಳಿಗೆ ಶಾಶ್ವತವಾಗಿ ಅಂಧತ್ವ ನಿವಾರಿಸಿದ್ದಾರೆ.
ಡಾ. ಮಹಿಪತಿ ಮಧಾಚಾರ್ಯ ಜೋಶಿ ಹುಬ್ಬಳ್ಳಿಯಲ್ಲಿ ಎಂ.ಎಂ. ಜೋಶಿ ವಿಜ್ಞಾನ ಸಂಸ್ಥೆಯನ್ನು ಆರಂಭಿಸಿದ ನಂತರ ಬಡಬಗ್ಗರಿಗೆ ಉಚಿತ ಸೇವೆ ನೀಡಲಾಗುತ್ತಿದೆ. 1967ರಿಂದ ಹುಬ್ಬಳ್ಳಿಯಲ್ಲಿ ನೇತ್ರ ಚಿಕಿತ್ಸಕರಾಗಿ ಸೇವೆ ಆರಂಭಿಸಿದರು. 75 ಹಾಸಿಗೆಯ ಸಾಮರ್ಥ್ಯ ಹೊಂದಿದ ಖಾಸಗಿ ನೇತ್ರ ಚಿಕಿತ್ಸಾ ಕೇಂದ್ರ ಇವರದ್ದು. ಇವರು ಸ್ಥಾಪಿಸಿದ ನೇತ್ರ ಭಂಡಾರ (ಶ್ರೀ ಗುರು ಮಹಿಪತಿರಾಜ ಕಣ್ಣಿನ ಸಂಗ್ರಹ ಕೇಂದ್ರ) ಮತ್ತು ನೇತ್ರ ಸಂಸ್ಕರಣಾ ಕೇಂದ್ರ 1997ರಲ್ಲಿ ಉತ್ತಮ ಸಂಗ್ರಹ ಸಂಸ್ಥೆಯೆಂದು ಗುರುತಿಸಲ್ಪಟ್ಟಿದೆ. ವಿವಿಧೆಡೆ ಸುಮಾರು 450 ಉಚಿತ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸಿದ್ದಾರೆ. ನಾಲ್ಕು ದಶಕಗಳಲ್ಲಿ ಒಟ್ಟು 3.5 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ, ಒಂದು ಲಕ್ಷ ಮಂದಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿ ಲೆನ್ಸ್ ಅಳವಡಿಸಿದ ಸಾಧನೆ. 1989ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಇವರ ಪಾಲಾಗಿವೆ.
ವೈದ್ಯಕೀಯ ಸೇವೆ ಇಂದಿನ ದಿನಮಾನದಲ್ಲಿ ಸೇವೆಯಾಗಿ ಉಳಿದಿಲ್ಲ. ಹಣಗಳಿಕೆಯ ಮಾರ್ಗವಾಗಿದೆ. ಕಡುಬಡರಿಗೆ ಉಚಿತ ವೈದ್ಯಕೀಯ ತಪಾಸಣೆ ಮಾಡುವ ಕಾಯಕಕ್ಕೆ ವೈದ್ಯರು ಮುಂದಾಗಬೇಕಿದೆ.
- ಡಾ. ಎಂ. ಎಂ. ಜೋಶಿ
-ಪ್ರಕಾಶ್ ಎಸ್.ಶೇಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.