ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರಂಗಶಂಕರದಲ್ಲಿ ತಿಂಗಳಿಡೀ ನಾಟಕ

Rashmi Kasaragodu
Updated On : 30 Jun 2013, 4:10 am

ರಂಗಶಂಕರದಲ್ಲಿ ಜುಲೈ ತಿಂಗಳಿಡೀ ನಾಟಕ ಪ್ರದರ್ಶನಗೊಳ್ಳಲಿದೆ. ಜುಲೈ 1ರಿಂದ ಪ್ರಾರಂಭವಾಗುವ ನಾಟಕ ಜುಲೈ 28ರವರೆಗೂ ಪ್ರತಿದಿನ ನಡೆಯಲಿದೆ. ಕೊನೆಯ ಎರಡು ದಿನ ಮಾತ್ರ ಯಾವುದೇ ನಾಟಕ ಪ್ರದರ್ಶನ ಇರುವುದಿಲ್ಲ.
ಜುಲೈ 1, 2013ರಂದು ಸೋಮವಾರದಿಂದ ಪ್ರಾರಂಭವಾಗುವ ನಾಟಕ ಸರಣಿಗಳಲ್ಲಿ ಸ್ವಿಜರ್ಲೆಂಡ್, ಪೊರ್ಚುಗಲ್, ಆಸ್ಟ್ರೇಲಿಯಾ ತಂಡಗಳೂ ಭಾಗವಹಿಸಲಿವೆ. ಇಷ್ಟಲ್ಲದೇ ದೇಶದ ಬೇರೆ ಬೇರೆ ರಾಜ್ಯಗಳಿಂದ ಹೆಸರಾಂತ ತಂಡಗಳು ಆಗಮಿಸಿ ಪ್ರದರ್ಶನ ನೀಡಲಿವೆ.
ಜುಲೈ 1ರಂದು ಪ್ರದರ್ಶನಗೊಳ್ಳಲಿರುವ ಪ್ರಥಮ ನಾಟಕ 'ಮಿಮ್ಮಿ ಆ್ಯಂಡ್ ಬ್ರುಮ್-ಚಮೋಲಿ ಟೀ'. ಇದರ ಸಂಭಾಷಣೆ ಹಾಗೂ ನಿರ್ದೇಶನ ಮಾರ್ಗ್ರಿಟ್ ಗಿಸಿನ್ ಅವರದು. ಮಧ್ಯಾಹ್ನ 3. 30ರಿಂದ ಪ್ರದರ್ಶನಗೊಳ್ಳುವ 45 ನಿಮಿಷಗಳ ಇಂಗ್ಲಿಷ್ ನಾಟಕವನ್ನು ಸ್ವಿಜರ್ಲೆಂಡ್ನ ಫಿಗುರೆಂಥಿಯೇಟರ್ ತಂಡ ಪ್ರದರ್ಶಿಸಲಿದೆ.
ಜುಲೈ 2ರಂದು ರಂಗಶಂಕರ ತಂಡ (ಇಂಟರ್ನ್ಯಾಷನಲ್ ಥಿಯೇಟರ್ ಫಾರ್ ಚಿಲ್ಡ್ರನ್ ಫೆಸ್ಟೀವಲ್) ದಿಂದ 'ರಾಜ ತಂತ್ರ ಛೂ ಮಂತ್ರ' ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ಇದರ ಸಂಭಾಷಣೆ ಹಾಗೂ ನಿರ್ದೇಶನ ವಿನೋದ್ ರವೀಂದ್ರ ಅವರದು. 60 ನಿಮಿಷಗಳ ಈ ನಾಟಕ ಮಂಗಳವಾರ ಮತ್ತು ಬುಧವಾರ ಎರಡೂ ದಿನ ಪ್ರದರ್ಶನಗೊಳ್ಳಲಿದೆ.
ಜುಲೈ 4ರಂದು 'ಟೆಮಿಂಗ್ ಆಫ್ ದಿ ವರ್ಲ್ಡ್'. 75 ನಿಮಿಷಗಳ ಈ ನಾಟಕ ಟಾಲ್ಸ್ ಥಿಯೇಟರ್, ಕೋಲ್ಕತಾ ತಂಡದಿಂದ ಪ್ರದರ್ಶನಗೊಳ್ಳಲಿದೆ. ಇದರ ಸಂಭಾಷಣೆ ಮತ್ತು ನಿರ್ದೇಶನ ಸುದೀಪ್ ಗುಪ್ತಾ ಅವರದು.
5.7.2013ರಂದು ಮಕ್ಕಳ ಚಿತ್ರ ಪ್ರದರ್ಶನವಿದೆ. 84 ನಿಮಿಷಗಳ ಹಿಂದಿ ಫಿಲ್ಮ್ 'ಹೆಡಾ ಹೋಡಾ'. ಜುಲೈ 6ರಂದು ಪ್ರದರ್ಶನಗೊಳ್ಳಲಿರುವ ನಾಟಕ 'ದಿ ಜಂಗಲ್ ಬುಕ್' 120 ನಿಮಿಷಗಳ ಇಂಗ್ಲಿಷ್ ನಾಟಕವನ್ನು ನಿರ್ದೇಶಿಸಿದವರು ಶಿವಾನಿ ಟಂಕ್ಸಾಲೆ ಮತ್ತು ಸುಮೀತ್ ವ್ಯಾಸ್. ಮುಂಬಯಿಯ 'ರಂಗ್ ಬಾಜ್' ತಂಡ ಈ ನಾಟಕವನ್ನು ಪ್ರದರ್ಶಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement