ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಶ್ರೀರಾಮಕೃಷ್ಣರ ಶಿಕ್ಷಣದ ಪರಿ

Rashmi Kasaragodu
Updated On : 30 Jun 2013, 4:15 am

'ರಾಮಕೃಷ್ಣರ ಅಲೌಕಿಕವಾದ ಸ್ನೇಹ, ಪ್ರೀತಿ, ವಿಶ್ವಾಸಗಳನ್ನು ಅನುಭವಿಸಿದ ನರೇಂದ್ರ ಹೇಳುತ್ತಿದ್ದ, 'ಮೊಟ್ಟಮೊದಲಬಾರಿ ನೋಡಿದಾಗಿನಿಂದಲೂ ನನ್ನನ್ನು ಒಂದೇ ಸಮವಾಗಿ ನಂಬಿದವರೆಂದರೆ ರಾಮಕೃಷ್ಣರೊಬ್ಬರೇ. ನನ್ನಲ್ಲಿ ಏಕಪ್ರಕಾರವಾಗಿ ವಿಶ್ವಾಸವಿಟ್ಟವರೆಂದರೆ ಅವರು ಮಾತ್ರವೇ. ನನ್ನ ಸ್ವಂತ ತಾಯಿ ಮತ್ತು ಸೋದರರು ಕೂಡ ನನ್ನನ್ನು ಅಷ್ಟರಮಟ್ಟಿಗೆ ನಂಬಲಿಲ್ಲ. ರಾಮಕೃಷ್ಣರ ಈ ಅವಿಚ್ಛಿನ್ನ ಪ್ರೀತಿ ಮತ್ತು ವಿಶ್ವಾಸವೇ ನನ್ನನ್ನು ಅವರೊಂದಿಗೆ ಎಂದೆಂದಿಗೂ ಬಂಧಿಸಿಬಿಟ್ಟಿದೆ. ಹೃತ್ಪೂರ್ವಕವಾಗಿ ಪ್ರೀತಿಸುವ ಬಗೆ ಏನೆಂಬುದು ಅವರಿಗೆ ಮಾತ್ರ ತಿಳಿದಿತ್ತು. ಪ್ರಾಪಂಚಿಕರ ಪ್ರೀತಿಯೆಲ್ಲ ಕೇವಲ ಸೋಗು, ತೋರ್ಗಾಣಿಕೆ. ಅದರ ಹಿಂದೆ ಸ್ವಾರ್ಥ ತುಂಬಿಕೊಂಡಿರುತ್ತದೆ.'
ನರೇಂದ್ರನು ರಾಮಕೃಷ್ಣರೊಂದಿಗೆ ಬಿಗಿದಿಟ್ಟಿರುವ ಅಭೇದ್ಯವಾದ ಬಂಧನವೆಂದರೆ ಅವರ ಅಲೌಕಿಕ ನಿಸ್ವಾರ್ಥ ಪ್ರೇಮ. ಅದರ ಲಕ್ಷಣವೆಂದರೆ, ಅಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯ ನಿರೀಕ್ಷೆಯೂ ಇರಲಾರದು. ರಾಮಕೃಷ್ಣರಲ್ಲಿ ಕಂಡು ಅನುಭವಿಸಿರುವುದು ಆ ಬಗೆಯ ನಿಸ್ವಾರ್ಥ ಪ್ರೇಮವನ್ನು.
ರಾಮಕೃಷ್ಣರು ಶಿಷ್ಯರಲ್ಲಿ ಆಧ್ಯಾತ್ಮಿಕ ಜೀವನವನ್ನು ರೂಪಿಸಿದ ಪರಿ ಪರಮಾದ್ಭುತ. ಬಹಳ ಎಚ್ಚರಿಕೆಯಿಂದ ನಿಧಾನವಾಗಿ, ಕೆಲವು ಸಲ ಶಿಷ್ಯನನ್ನು ಸೋಲಿಸಿ, ಇನ್ನು ಕೆಲವು ಸಲ ತಾನೇ ಸೋತು ಶಿಷ್ಯನಲ್ಲಿ ಆತ್ಮವಿಶ್ವಾಸ ಹುಟ್ಟಿಸುತ್ತಾರೆ. ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ದೈವತ್ವವನ್ನು ಕಾಣಬಲ್ಲವರಾಗಿದ್ದರು. ಭವಿಷ್ಯದ ಭವ್ಯ ಚಿತ್ರವನ್ನು ಅವರ ಕಣ್ಮುಂದೆ ಹಿಡಿಯುತ್ತ ಹುರಿದುಂಬಿಸುತ್ತಿದ್ದರು. ಇವೆಲ್ಲವನ್ನು ಅವರು ಶಿಷ್ಯರ ಅರಿವಿಗೆ ಬಾರದಂತೆ ಮಾಡುತ್ತಿದ್ದರು.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement