ಕೋಪದ ಅಬ್ಬರ (ಸಣ್ ಸ್ಟೋರಿ)
ಒಬ್ಬ ಹುಡುಗನಿದ್ದ. ಅವನಿಗೆ ಸಿಕ್ಕಾಪಟ್ಟೆ ಮುಂಗೋಪ. ಅವನನ್ನು ಸುಧಾರಿಸಲು ಅಪ್ಪ ಒಂದು ಉಪಾಯ ಮಾಡಿದ. ಒಂದಷ್ಟು ಉಗುರುಗಳುಳ್ಳ ಚೀಲ, ಸುತ್ತಿಗೆ ಮತ್ತು ಕತ್ತಿ ಕೊಟ್ಟು ಹೇಳಿದ, 'ನಿನಗೆ ಕೋಪ ಬಂದಾಗಲೆಲ್ಲ ಒಂದು ಉಗುರನ್ನು ಕತ್ತಿ ಮೇಲಿಟ್ಟು ಸುತ್ತಿಗೆಯಿಂದ ಹೊಡಿ.' ಮೊದಲ ದಿನ 37 ಉಗುರುಗಳು! ಎರಡನೇ ದಿನದಿಂದ ಕೋಪ ನಿಯಂತ್ರಿಸಿಕೊಳ್ಳುವುದನ್ನು ಹುಡುಗ ಕಲಿಯಲಾರಂಭಿಸಿದ. ಅವನಿಗೆ ಗೊತ್ತಾಗಿತ್ತು, ಪ್ರತಿಸಲ ಉಗುರನ್ನು ಕತ್ತಿ ಮೇಲಿಟ್ಟು ಹೊಡೆಯುವುದಕ್ಕಿಂತ ಸಿಟ್ಟು ನಿಯಂತ್ರಿಸಿಕೊಳ್ಳುವುದು ಸುಲಭ ಎಂದು.
ಒಂದು ದಿನ ಅಪ್ಪನ ಬಳಿ ಬಂದು ಹೇಳಿದ, 'ನನಗೀಗ ಸಿಟ್ಟು ಬರುವುದಿಲ್ಲ.' 'ವೆರಿಗುಡ್' ಎಂದ ತಂದೆ ಮಗನನ್ನು ಕತ್ತಿ ಬಳಿ ಕರೆದೊಯ್ದು ಹೇಳಿದರು, 'ಮಗನೇ, ಈ ಕತ್ತಿ ನೋಡು. ನೀನು ಪ್ರತಿ ಸಲ ಹೊಡೆದಾಗಲೂ ಅದಕ್ಕೆ ಗಾಯವಾಗಿದೆ. ಸಿಟ್ಟಿನ ಪರಿಣಾಮವೂ ಹಾಗೆಯೇ. ಒಮ್ಮೆ ಸಿಟ್ಟಿನಲ್ಲಿ ಯಾರಿಗಾದರೂ ಚೂರಿಯಿಂದ ಇರಿಯುತ್ತೇವೆ ಎಂದುಕೊ. ಶಾಂತವಾದ ಮೇಲೆ ಅವನ ಬಳಿ ಹೋಗಿ ಕ್ಷಮೆ ಕೇಳಿದರೆ ಅರ್ಥ ಇರುತ್ತದೆಯಾ? ನಾವು ಮಾಡಿದ ಗಾಯ ಆ ವ್ಯಕ್ತಿಯನ್ನು ಸದಾ ಕಾಡುತ್ತಿರುತ್ತದೆ ಅಲ್ಲವೆ?'
ಹುಡುಗನಿಗೆ ಅರ್ಥವಾಯಿತು. ಆತ ಮತ್ತೆಂದೂ ಸಿಟ್ಟು ಮಾಡಿಕೊಳ್ಳಲಿಲ್ಲ.