ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಾಲಿಗೆ ನುಲಿ (ನುಲಿ ನಲಿ)

Rashmi Kasaragodu
Updated On : 1 Mar 2013, 3:24 am

ಕಂಬಿ ಕಿತ್ತ ಕಳ್ಳ, ಕಳ್ಳು ಕುಡಿದಿದ್ದರಿಂದ ಕಂಬಿಕೀಳಲಾಗದೆ, ಕಂಬಿಗಳ ಸುತ್ತ ಕೈ ಕುಣಿಸಿ, ಕಣ್ಣೇಲೆ ಮಾಡಿದ.

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಕೊರಳ ಸುತ್ತಿನ ಹಾರದ ಕೊನೆಯಲ್ಲಿ
ತೂಗುವ ಪ್ರಶಸ್ತಿ            -
ಮೊದಲೆರಡು ಅಕ್ಷರ ಇಂಗ್ಲೀಷ್‌ನ 'ವರ್ಡ್‌'    -
ಹಣ್ಣು ತಿನ್ನಲು ಆಗದಷ್ಟು ಹಣ್ಣಾದರೆ,
ಹೀಗೆ ಹೇಳುತ್ತಾರೆ            -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಒಂದು ರಾಜ್ಯದ, ದೇಶದ ಮುಖ್ಯ ಪಟ್ಟಣ    -
ಈ ರಾಜ ಸದಾ ಜಯಗಳಿಸುತ್ತಿರುತ್ತಾನೆ,
ಹಿಂದುಮುಂದಾಗಿ            -
ಮಳೆಯ 'ಧಾರೆ' ನಿಲ್ಲದೆ ಸುರಿದರೆ, ಅದಕ್ಕೆ
ಈ ಹೆಸರು                -
ರವಿ, ನೀನು ಸದಾ ನಿಜ ಹೇಳುತ್ತೀಯ, ಎಂದು
ಒಪ್ಪುವ ಒಂದಕ್ಷರದ ಹೇಳಿಕೆ        -

ಗತಪ್ರತ್ಯಾಗತ
ಕೋತಿ ಆಡಿಸುವವನ ಸುತ್ತಾ ನಿಂತಿರುವವರು ಸಿಕ್ಕಾಪಟ್ಟೆ ಗಲಾಟೆ ಮಾಡಿದಾಗ, ಗಾಬರಿಯಾದ ಕೋತಿಗೆ, ತಪ್ಪಿಸಿಕೊಂಡು ಹೋಗಲೂ ಆಗದೆ ಇದ್ದಾಗ, ಅದು ಹಾಕಿದ ಪಲ್ಟಿ ಲಾಗ- 'ಗಲಾಟೆಲಾಗ'

ನಿನ್ನೆಯ ಉತ್ತರಗಳು
3 ಅಕ್ಷರ- ಖನಿಜ, ನಿವ್ವಳ, ಜಳಕ
4 ಅಕ್ಷರ- ಬಡತನ, ಡಮರುಗ, ತರುಣಿಗೆ, ನಗಗೆಜ್ಜೆ


-ಎಲ್.ಜಿ. ಜ್ಯೋತೀಶ್ವರ
lgjyothish@gmail.com

ಮೊ:9845317141


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement