ಬಹ್ರೈನ್‌ನಲ್ಲಿ ಯಕ್ಷ ಸೌರಭ
ಸಾರ್ಥ ಪ್ರತಿಷ್ಠಾನ, ಕುಮಟಾ(ರಿ), ಸಾರ್ಥ ಫೌಂಡೇಷನ್ ಬಹ್ರೈನ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಜಂಟಿಯಾಗಿ ಇಂನ್ಟೆರ್ ಆಡ್ಸ್ ಮತ್ತು ಬಾರೊನ್ ಮ್ಯಾನೇಜ್‌ಮೆಂಟ್ ಕಂಪನಿಯ ಸಹಕಾರದೊಂದಿಗೆ ಶ್ರೀ ವೀರಾಂಜನೇಯ ಯಕ್ಷ ಮಿತ್ರಮಂಡಳಿ, ಬಂಗಾರುಮಕ್ಕಿ(ರಿ) ಇವರಿಂದ 'ಸಾರ್ಥ ಯಕ್ಷೋತ್ಸವ' 2 ದಿನದ ಬಡಗುತಿಟ್ಟಿನ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನಕ್ಕೆ ಮೊದಲ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಪ್ರಥಮಬಾರಿಗೆ ಕೊಲ್ಲಿ ರಾಷ್ಟ್ರದಲ್ಲಿ ತಮ್ಮ ಅಭಿನಯ ಮೆರೆಯಲಿದ್ದಾರೆ. ಬಹ್ರೈನ್‌ನ ಗುದೇಬಿಯಾದ್ ಸೌಥ್‌ಪಾರ್ಕ್ ರೆಸ್ಟೋರೆಂಟ್‌ನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾರ್ಚ್ 7ರಂದು ಮಾಗಧವಧೆ ಹಾಗೂ 8ರಂದು ಕೃಷ್ಣಾರ್ಜುನ ಕಾಳಗ ಯಕ್ಷಗಾನ ನಡೆಯಲಿದೆ. ಅಲ್ಲದೇ, 7ರಂದು ಚಿಟ್ಟಾಣಿಯವರಿಗೆ ಸನ್ಮಾನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.
ದಿನಾಂಕ: ಮಾರ್ಚ್ 7 ಮತ್ತು 8, 2013. ಸ್ಥಳ: ಬಹ್ರೈನ್‌ನ ಗುದೇಬಿಯಾದ ಸೌಥ್‌ಪಾರ್ಕ್ ರೆಸ್ಟೋರೆಂಟ್‌ನ ಸಭಾಂಗಣ ಸಮಯ: ಗುರುವಾರ ಸಂಜೆ 7.30 ಹಾಗೂ ಶುಕ್ರವಾರ ಸಂಜೆ 5 ಗಂಟೆ.