ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಗ್ನಿಮುಖದ ಕಿಡಿಗಳು

Parashurama
Updated On : 8 Mar 2013, 3:55 am

ಭಾರತೀಯರು ದೀರ್ಘನಿದ್ರೆಯಿಂದ ಮಲಗಿದ್ದಾರೆ. ಅವರನ್ನು ಎಚ್ಚರಿಸಬೇಕಾದರೆ ದೊಡ್ಡ ಸದ್ದನ್ನು ಮಾಡಬೇಕು. ಸಾಮಾನ್ಯ ಬೆಳಕಿಗೆ ಕಣ್ತೆರೆಯದ ಅವರ ಮುಂದೆ ಜ್ವಾಲಾಮುಖಿಯಂತೆ ಸಿಡಿಯಬೇಕು. ಆಗಲಾದರೂ ಎಚ್ಚೆತ್ತುಕೊಂಡಾರು! ಕೆಲವು ಭಾರತೀಯರು ಎಚ್ಚರಗೊಂಡರೂ ಸ್ವಾರ್ಥಪ್ರೇರಿತರಾಗಿ ಸೇವಾಮಾರ್ಗಕ್ಕಿಂತ ಸಂಪಾದನಾ ಮಾರ್ಗದಲ್ಲಿ ಮುಳುಗಿರುವುದು ಆತಂಕಕಾರಿ ವಿಷಯವಾಗಿದೆ. ಅಂತಹ ಸ್ವಾರ್ಥನಿಷ್ಠ ಭಾರತೀಯರಿಗೆ ಚುರುಕು ಮುಟ್ಟಿಸಲು ಸ್ವಾಮೀಜಿತಮ್ಮ ಮಾತಿನ ಜ್ವಾಲೆಯಿಂದ ಅಗ್ನಿಯ ಕಿಡಿಗಳನ್ನು ಸಿಡಿಸಿದ್ದಾರೆ.
'ತ್ಯಾಗ! ಇದೇ ಭಾರತದ ಬಾವುಟ, ಹಿಂದೂ ಧರ್ಮದ ಲಾಂಛನ. ಹಿಂದೂಗಳೇ ಆ ಬಾವುಟವು ನಿಮ್ಮ ಕೈಜಾರಲು ಬಿಡದಿರಿ! ಅದನ್ನು ಮೇಲೆತ್ತಿ ಹಿಡಿಯಿರಿ. ನೀವು ದುರ್ಬಲರಾಗಿದ್ದು, ತ್ಯಾಗ ಮಾಡಲು ನಿಮ್ಮಿಂದ ಸಾಧ್ಯವಿಲ್ಲವಾದರೂ, ಆದರ್ಶವನ್ನು ಮಾತ್ರ ಕೆಳಗಿಳಿಸಬೇಡಿ. 'ನಾನು ದುರ್ಬಲ, ನಾನು ತ್ಯಾಗ ಮಾಡಲಾರೆ' ಎಂದು ನೇರವಾಗಿ ಹೇಳಿಬಿಡಿ. ಅದನ್ನು ಬಿಟ್ಟು ಇಲ್ಲಸಲ್ಲದ ವಾದ ಮಾಡುತ್ತಾ, ಶಾಸ್ತ್ರಾರ್ಥವನ್ನು ತಿರುಚುತ್ತ, ಅರಿಯದವರ ಕಣ್ಣಿಗೆ ಮಣ್ಣೆರಚುತ್ತ ಬೂಟಾಟಿಕೆಯಾಡಬೇಡಿ. ಏಕೆಂದರೆ ತ್ಯಾಗದ ಈ ಆದರ್ಶವು ಶ್ರೇಷ್ಠವಾದುದು, ಅತ್ಯುತ್ಕೃಷ್ಟವಾದುದು.'
'ಪುರಾತನ ಮಹರ್ಷಿಗಳು ಬಿಟ್ಟುಹೋಗಿರುವ ಭವ್ಯ ಪರಂಪರೆಯನ್ನು, ಅನಂತ ಜ್ಞಾನನಿಧಿಯನ್ನು ಉಳಿಸಿಕೊಳ್ಳಲು ಬೇಕಾದಂತಹ ಬುದ್ಧಿಶಕ್ತಿಯನ್ನು ಬೆಳೆಸಿಕೊಳ್ಳಿ. ಭಾರತೀಯರೇ, ಅತಿ ಮಡಿವಂತಿಕೆ ಮತ್ತು ಅಡುಗೆಮನೆಯ ಧರ್ಮದಿಂದ ಮುಕ್ತರಾಗಿ, ಅರ್ಥರಹಿತ ಚರ್ಚೆಗಳನ್ನು, ಅಸಂಬದ್ಧ ಹೋರಾಟಗಳನ್ನು ನಿಲ್ಲಿಸಿ ಉಪಯುಕ್ತವಾದ ಕಾರ್ಯದಲ್ಲಿ ತೊಡಗಿಕೊಳ್ಳಿ.'

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments