ನುಲಿ ನಲಿ
ನಾಲಿಗೆ ನುಲಿ
ಆರೋಪಗಳ ಆಲಾಪ ಅತಿ ಅಥವಾ ಅಪರೂಪ ಅಲಾಲಟೋಪಿಗಳ ಆಟಾಟೋಪ ಅದೆಷ್ಟೋ ರೂಪ.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಸಭಾಭವನ, ದೇವಸ್ಥಾನ, ಮರದ ಮಧ್ಯೆ
ಮಂದವಾಗಿರುವ ಕಟ್ಟಡ -
ನಾವು ದಿನವೂ ವಸ್ತುಗಳನ್ನು ಕೊಳ್ಳುವ
ಅಂಗಡಿ, ಕಿರಾಣಿ, ವಸ್ತುಗಳು -
ಇವನ ಕೈ ಹಿಂದು-ಮುಂದು, ತಲೆಯೂ ಹಿಂದು ಮುಂದು, ಒಟ್ಟಾರೆ ಜೀವನವನ್ನು ಸವಿಯುವವ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಇದು ರಸ್ತೆಯನ್ನು ಎರಡಾಗಿಸಿ, ಎಲ್ಲರನ್ನೂ
ರಕ್ಷಿಸುವ ತಡೆಗೋಡೆ -
ಪೆಠಾರಿಯಲ್ಲಿ ನಗ ದುಡ್ಡು, ಖಾತೆ ಭದ್ರತಾ ಠೇವಣಿ
ಕಪಾಟಿನಲ್ಲಿ ಹಣ, ಒಡವೆಗಳು -
ಲೆಕ್ಕದ ಜಮಾಗೆ ದಾರ ಸೇರಿಸಿದರೆ,
ಹಳೆಯ ಕಾಲದ ಅಧಿಕಾರಿ -
ಈ ಕಷಾಯ, ರಸ, ತುಂಬಾ ದಟ್ಟವಾಗಿದೆ, ಸ್ವಾಮಿ -
ಗತಪ್ರತ್ಯಾಗತ
ಉತ್ತರ ಕರ್ನಾಟಕ, ಧಾರವಾಡದ ಕಡೆ ಕೇಸರಿಭಾತಿನ ಹೆಸರು ಶಿರಾ, ಅಥವಾ ಸಿರಾ. ಇಂಥ ಕೇಸರಿಭಾತಿನ ಒಂದು ರಾಶಿಯನ್ನು ಹೇಗೆ ಕರೆಯಬಹುದು- 'ರಾಸಿಸಿರಾ' ಅಥವಾ 'ಶಿರಾರಾಶಿ'
ನಿನ್ನೆಯ ಉತ್ತರಗಳು
3 ಅಕ್ಷರ- ಸರಸ, ರಮೇಶ, ಸಶಕ್ತ.
4 ಅಕ್ಷರ- ನವಮಾಸ, ವರಯಾಕ, ಮಾಯಾಜಾಲ, ಸಕಲರ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.