ಬದುಕೆಂದರೆ ಸಿನಿಮಾ ಅಲ್ಲ
ನನ್ನ ಮದುವೆಯಾಗಿ 3 ವರ್ಷಗಳಾ ದವು. ಈಗಲೇ ನನಗೆ ಜೀವನ ಬೇಸರವಾಗಿಬಿಟ್ಟಿದೆ. ನನಗೆ ಹೋಟೆಲ್ ಊಟ ಮಾಡುವುದು, ಸಿನಿಮಾ ನೋಡುವುದೆಂದರೆ ಇಷ್ಟ. ನನ್ನ ಯಜ ಮಾನರಿಗೆ ಇಂಥದ್ದರಲ್ಲಿ ಆಸಕ್ತಿಯೇ ಇಲ್ಲ. ಏನು ಮಾಡಲಿ?
- ಸುರೇಖಾ ಎಂ., ಮಾಲಗತ್ತಿ
ಜೀವನವೆಂದರೆ ಹೋಟೆಲ್ ಊಟ, ಸಿನಿಮಾ ಪಾರ್ಕು ಸುತ್ತಾಡುವು ದಲ್ಲ. ಅಪರೂಪಕ್ಕೊಮ್ಮೆ ಹೋಗಬಹುದಾದರೂ, ಪದೇಪದೆ ಹೋಗುವುದು ಯಾರಿಗೂ ಇಷ್ಟವಾಗುವುದಿಲ್ಲ. ಟಿವಿಯಲ್ಲಿ ಅನೇಕ ಸಿನಿಮಾ ಚಾನೆಲ್ಗಳೇ ಇವೆ. ಮನೆಯಲ್ಲಿ ಆರಾಮಾಗಿ ಕೂತು ಸಿನಿಮಾ ನೋಡಬಹುದಲ್ಲ? ಹೊರಗಡೆ ಕೆಲಸ ಮಾಡುವವರಿಗೆ ಒಂದು ದಿನವಾದರೂ ಮನೆಯಲ್ಲಿ ಖುಷಿಯಿಂದ ಕಾಲಕಳೆಯುವ ಆಸೆ. ಇದರಿಂದ ದುಡ್ಡೂ ಉಳಿತಾಯ, ಟೆನ್ಷನ್ ಫ್ರೀ.
-ಡಾ. ಸ್ಯಾಟಲೈಟ್
anekaby2@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.