ಗುರುವಿನ ಧೀರವಾಣಿ
ಮನುಷ್ಯನು ತನ್ನ ಇಷ್ಟಾರ್ಥಗಳು ಸಿದ್ಧಿಸಿದಂತೆ ಅಹಂಭಾವ ಹೊಂದತೊಡಗುತ್ತಾನೆ. ತಾಯಿ ಕೃಪೆಯನ್ನು ಮರೆತು ತನ್ನ ಶಕ್ತಿ ಸಾಮರ್ಥ್ಯದಿಂದಲೇ ಎಲ್ಲವೂ ಸಾಧ್ಯ ಎಂದು ಭ್ರಮಿಸುತ್ತಾನೆ. ಮರುಕ್ಷಣದಲ್ಲಿಯೇ ಅಹಂಜೀವನಕ್ಕೆ ಬಲವಾದ ಪೆಟ್ಟು ಬಿದ್ದಾಗ ತಾಯಿ ಬಳಿ ಕಾಲು ಮುದುರಿ ಕುಳಿತು ಬೇಡತೊಡಗುತ್ತಾನೆ. ಆದ್ದರಿಂದ ಬದುಕಿನ ಭೀಕರತೆಗೂ, ಶ್ರೇಷ್ಠತೆಗೂ ತಾಯಿಯ ಕೃಪೆಯೇ ಕಾರಣ ಎಂದರಿತು ಅಹಂಕಾರ ಮರೆತು ಉಜ್ಜೀವನದತ್ತ ಸಾಗಬೇಕು.
'ಯಾವ ತಾಯಿಯನ್ನು ನೀವು ಮಾಧುರ್ಯ-ಆನಂದಗಳಲ್ಲಿ ಗುರುತಿಸುತ್ತೀರೋ, ಅಷ್ಟೇ ಸಹಜವಾಗಿ ಅವಳನ್ನು ದುಃಖ, ದಾರಿದ್ರ್ಯ, ದೌರ್ಜನ್ಯ, ವಿಧ್ವಂಸಕತೆಗಳಲ್ಲೂ ಕಾಣುವುದನ್ನು ಕಲಿಯಿರಿ. ನಾವು ನಮ್ಮ ಭ್ರಮೆಯನ್ನು ಕಿತ್ತೊಗೆದು ಸತ್ಯಸ್ವರೂಪಿಯಾದ ಭಗವಂತನ ರೌದ್ರರೂಪದ ಸತ್ಯತೆಯನ್ನು ಗುರುತಿಸಿ ಆರಾಧಿಸಬೇಕು.ಭಯವೆಂದಿಗೂ ಇರಬಾರದು, ಬೇಡುವುದಲ್ಲ, ಪಡೆಯುವುದು. ತಾಯಿಯ ನಿಜವಾದ ಭಕ್ತರು ಹಟಮಾರಿಗಳಂತೆ ದೃಢಚಿತ್ತರು, ಸಿಂಹದಂತೆ ನಿರ್ಭೀತರು, ಇಡೀ ವಿಶ್ವವೇ ತಮ್ಮ ಕಾಲ ಕೆಳಗೆ ಕುಸಿದುಬಿದ್ದರೂ ಲೆಕ್ಕಿಸುವವರಲ್ಲ. ಆಕೆಯು ನಿಮ್ಮ ಮಾತನ್ನು ಕೇಳಿಯೇ ತೀರುವಂತೆ ಮಾಡಿ.ತಾಯಿಯನ್ನು ಅತಿ ದೈನ್ಯದಿಂದ ಬೇಡಿಕೊಳ್ಳುವುದಲ್ಲ. ನೆನಪಿಡಿ! ಅವಳು ಸರ್ವಶಕ್ತಿ ಸ್ವರೂಪಿಣಿ. ಒಂದು ಮಣ್ಣುಹೆಂಟೆಯಿಂದ ಕೂಡ ಆಕೆ ಧೀರರನ್ನು ನಿರ್ಮಿಸಬಲ್ಲಳು.'
'ಎಲ್ಲೆಲ್ಲಿ ಭಯವಿಲ್ಲವೋ, ಎಲ್ಲೆಲ್ಲಿ ತ್ಯಾಗವಿದೆಯೋ, ಎಲ್ಲಿ ಅಹಮಿಕೆಯೆಂಬುದು ನಶಿಸಿಹೋಗಿದೆಯೋ ಅಲ್ಲೆಲ್ಲ ಜಗನ್ಮಾತೆ ಇದ್ದಾಳೆ.'
-ಆನಂದ ಎಸ್.ಎನ್.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.