ನುಲಿ ನಲಿ
ನಾಲಿಗೆ ನುಲಿ
ಜಾತ್ರೆಗಳಲ್ಲಿ ಜಗಝಗಿಸುವ ಜರತಾರಿಗಳ ಜೊತೆ ಜಿಲೇಬಿ-ಜಾಂಗೀರುಗಳ ಜಗಿದು, ಜಿಗಿಜಿಗಿದು, ಗಿಜಿಗಿಜಿ ಜನಜಂಗುಳಿಯ ಜಾಲಗಳು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಆ'ಕ್ಷಿ' ಎಂದು ಸೀನಿದರೆ, ದಿಗಂತದ
ಕೊನೆಯ ತುದಿ ನೋಡಬಹುದು -
ಆಕಾಶಕ್ಕೆ ಮಿತಿ ಇಲ್ಲ-ಅದು ತಿರುಗಿದರೆ,
ಮಿರಮಿರ ಮಿಂಚುವ ಇನ್ನೊಂದು ಹೆಸರು -
ಈ ತೂತುಗಳಿರುವ ಸಾಧನ ಕಸ ಬೇರ್ಪಡಿಸಲು
ರ'ಜ' ಇರದೆ ಸದಾ 'ಸಿದ್ಧ' -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
'ಅನುರಾ'ಧಳನ್ನು ಕಡೆಯಲ್ಲಿ ಕತ್ತರಿಸಿದರೆ
ದೊರಕುವುದು ಪ್ರೀತಿಯ 'ರಾಗ' -
ಈ ತಾಣ 'ಮಾತು'ಗಳಿಗೆ ಆಶ್ರಯ ನೀಡುವಂಥ
ಒಂದು ಧಾಮ -
ಕೃಷ್ಣನ ಪ್ರಿಯೆ ಯಾರು? ಅವಳ 'ಧ್ವನಿ' -
ನೋಡು, ಎಚ್ಚರದಿಂದ ಪರೀಕ್ಷಿಸು,
ಲಕ್ಷ್ಯಗೊಟ್ಟು ಅವಲೋಕಿಸು -
ಗತಪ್ರತ್ಯಾಗತ
ಬಟವಾಡೆ, ಕಳುಹಿಸುವುದು ಎನ್ನುವುದಕ್ಕೆ ತಾಂತ್ರಿಕ ಪದ 'ರವಾನೆ' ಇಡೀವಾರ ಇದು ನಡೆಯುತ್ತಲೇ ಇದ್ದರೆ, ಆ ವಾರವನ್ನು ಹೀಗೂ ಕರೆಯಬಹುದು, ಅಲ್ಲವೇ? 'ರವಾನೆವಾರ'
ನಿನ್ನೆಯ ಉತ್ತರಗಳು
3 ಅಕ್ಷರ- ಮಂದಿರ, ದಿನಸಿ, ರಸಿಕ
4 ಅಕ್ಷರ- ವಿಭಜಕ, ಭದ್ರಮಾಡು, ಜಮಾದಾರ, ಕಡುರಸ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.