ಪ್ರೀತಿಯ ಮುನಿಸು
ಅದೊಂದು ಕಾಲೇಜು. ಆ ಹುಡುಗ ತನ್ನ ಸಹಪಾಠಿ ಹುಡುಗಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆದರೆ ಆ ಹುಡುಗಿ ಸುಂದರ, ಅವಿವಾಹಿತ ಉಪನ್ಯಾಸಕನಿಗೆ ಮನಸೋತಿದ್ದಳು. ಆ ಉಪನ್ಯಾಸಕನಿಗೆ ತನ್ನಷ್ಟೇ ಸಂಬಳ ತರುವ ಸಹಉಪನ್ಯಾಸಕಿ ಕೈಹಿಡಿಯಬೇಕೆಂಬ ಆಸೆಯಿತ್ತು. ಜಾಸ್ತಿ ಸಂಬಳ, ಅಪಾರ ಆಸ್ತಿ ಇರುವ ವರನ ಹುಡುಕಾಟದಲ್ಲಿದ್ದಳು ಆ ಉಪನ್ಯಾಸಕಿ. ಕೊನೆಗೊಂದು ದಿನ ಇವರೆಲ್ಲರೂ ಬೇರೆಯವರೊಂದಿಗೆ ಮದುವೆಯಾದರಾದರೂ ಅಲ್ಲಿ ಪ್ರೀತಿ ಇವರ ಮನಸ್ಥಿತಿ ಕಂಡು ಮುನಿಸಿಕೊಂಡು ದೂರ ಹೋಗಿತ್ತು.
- ಬಿ. ಸೋಮಶೇಖರ, ಸುರಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.