ಸಾರಸ್ವತ ಲೋಕ ಮೌನೇಶ್ಗೆ 'ಛಂದ' ಬಹುಮಾನ
ಈ ಸಾಲಿನ 'ಛಂದ' ಪುಸ್ತಕ ಬಹುಮಾನವನ್ನು ಯುವ ಕಥೆಗಾರ ಮೌನೇಶ ಎಲ್.ಬಡಿಗೇರ್ ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. ಹವ್ಯಾಸಿ ಪತ್ರಕರ್ತರೂ ಆಗಿರುವ ಮೌನೇಶ್, ಕನ್ನಡ ರಂಗಭೂಮಿಯಲ್ಲಿ ಸಕ್ರಿಯರು. ನೀನಾಸಂನಿಂದ ರಂಗಶಿಕ್ಷಣ ಡಿಪ್ಲೊಮಾ ಪಡೆದಿದ್ದಾರೆ.
'ಯುವ ಕಥೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ 50 ಹಸ್ತಪ್ರತಿಗಳು ಬಂದಿದ್ದವು. ಹಿರಿಯ ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ ತೀರ್ಪುಗಾರರಾಗಿದ್ದರು. ಬಹುಮಾನ ಪಡೆದ ಸಂಕಲನವನ್ನು 'ಛಂದ ಪುಸ್ತಕ' ಪ್ರಕಟಿಸುವುದರ ಜತೆಗೆ 10 ಸಾವಿರ ರುಪಾಯಿ ಪಾರಿತೋಷಕ ನೀಡಲಿದೆ. ಮೇ ಮೊದಲ ವಾರ ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ನಡೆಯಲಿದೆ' ಎಂದು 'ಛಂದ ಪುಸ್ತಕ'ದ ವಸುಧೇಂದ್ರ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.