ಹಿಂಜರಿಕೆ ಬಿಟ್ಬಿಡಿ
ನನಗೆ ಉಬ್ಬಸ ರೋಗವಿದೆ. ಚಳಿಗಾಲ ದಲ್ಲಂತೂ ತುಂಬಾ ಕಷ್ಟಪಡುತ್ತೇನೆ. ಈ ಕಾರಣಕ್ಕಾಗಿಯೇ ನನ್ನಲ್ಲಿ ಹಿಂಜರಿಕೆ ಜಾಸ್ತಿ. ಯಾರಾದರೂ ಏನನ್ನಾದರೂ ಕೇಳಿದರೆ, ಗೊತ್ತಿದ್ದರೂ ಹೇಳಲು ತಡ ವರಿಸುತ್ತೇನೆ. ಇದರಿಂದ ನನ್ನ ಮನೆಯ ವರಿಗೂ ಬೇಸರ. ಏನು ಮಾಡಲಿ?
- ವಿಘ್ನೇಶ್ ಬಿರಾದಾರ್, ಭಾಲ್ಕಿ
ಉಬ್ಬಸ ರೋಗ ಸಂಪೂರ್ಣ ಗುಣ ವಾಗದಿದ್ದರೂ ಹತೋಟಿಯಲ್ಲಿಟ್ಟು ಕೊಳ್ಳಬಹುದು. ಇದಕ್ಕಾಗಿ ಮುಜುಗರಪಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಉಬ್ಬಸ ನಿಯಂತ್ರಣಕ್ಕೆ ಆಧುನಿಕ ಸಲಕರಣೆಗಳು ಸಾಕಷ್ಟು ಬಂದಿವೆ. ಹಿಂಜರಿಕೆ ಹೋಗಲಾಡಿಸಿ ಕೊಳ್ಳಲು 'ಆಪ್ತ ಸಲಹೆ' ಪಡೆದುಕೊಳ್ಳಿ. ಮನೆಯವರಿಗೆ ನಿಮ್ಮ ಸಮಸ್ಯೆಯನ್ನು ಮುಚ್ಚು ಮರೆಯಿಲ್ಲದೆ ಹೇಳಿ. ಅವರೇ ನಿಮಗೆ ಸಹಾಯ ಮಾಡುತ್ತಾರೆ.
-ಡಾ. ಸ್ಯಾಟಲೈಟ್
anekaby2@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.