ವಿಪರ್ಯಾಸ!
ಆ ಯುವಕನಿಗೆ ಮದುವೆಯಾಗಿ ಎರಡೋ-ಮೂರೋ ತಿಂಗಳಾಗಿತ್ತಷ್ಟೆ. ಆಗಲೇ ಅತ್ತೆ-ಸೊಸೆಗೆ ಸಣ್ಣಪುಟ್ಟ ಜಗಳ, ಭಿನ್ನಾಭಿಪ್ರಾಯ ಪ್ರಾರಂಭವಾಗಿಬಿಟ್ಟಿತ್ತು. ಹಾಗಂತ ಅದೇನೂ ಅಂಥ ದೊಡ್ಡ ವಿಷಯವಾಗಿರಲಿಲ್ಲ. ಎಲ್ಲರ ಮನೆಯಂತೆಯೇ ಇತ್ತು. ಆದರೆ ಆತನ ಹೆಂಡತಿಗೆ ಅತ್ತೆ-ಮಾವನ ಬಗ್ಗೆ ಸಣ್ಣದೊಂದು ಅಸಡ್ಡೆ, ಅವರನ್ನು ನೋಡಿದರೆ ಸಿಡಿಸಿಡಿ, ಕಿರಿಕಿರಿ ಪ್ರಾರಂಭವಾಗಿತ್ತು. ಏನೇ ಆಗಲಿ ಅವರನ್ನು ಮನೆಯಿಂದ ಹೊರ ಕಳಿಸಿಯೇಬಿಡಬೇ ಕೆಂಬುದೇ ಆಕೆಯ ಒಂದಂಶದ ಅಜೆಂಡಾ ಆಗಿತ್ತು. ಪ್ರೈವೆಸಿಯ ನೆಪ ಹೇಳಿ ಅತ್ತೆ -ಮಾವನನ್ನು ವೃದ್ಧಾಶ್ರಮಕ್ಕೆ ಕಳುಹಿಸಲು ಹುನ್ನಾರ ಮಾಡತೊಡಗಿದಳು.
ಇನ್ನು ಆತನೋ ವಿವೇಚನೆ ಕಳೆದುಕೊಂಡಿದ್ದ. ಹೆತ್ತು, ಸಾಕಿ ಸಲಹಿದ ತಂದೆ ತಾಯಿಗಿಂತ ಹೆಂಡತಿಯ ಪ್ರೈವೇಸಿಯೇ ಆತನಿಗೆ ದೊಡ್ಡ ವಿಷಯವಾಯಿತು. ಹೆಂಡತಿಯ ಬೆಣ್ಣೆ ಮಾತುಗಳಿಗೆ ಕರಗಿಹೋದ. ತಾವಂದುಕೊಂಡಂತೆ ವೃದ್ಧ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸಲು ಸ್ವತಃ ಮಗನೇ ಮುಂದಾದ.
ಕಾಲಚಕ್ರ ಉರುಳಲೇಬೇಕಲ್ಲವೇ? ಉರುಳಿದ ಕಾಲಚಕ್ರದಲ್ಲಿ ಆತನ ಮಗನೂ ದೊಡ್ಡವನಾದ. ಮದುವೆಯೂ ಆಯಿತು. ಆ ಮಗ ತನ್ನ ತಂದೆ-ತಾಯಿಗೆ 'ಗೆಟ್ ಔಟ್' ಎಂದ. ಆಗ ಆ ತಂದೆ ಹೆಂಡತಿಯ ಮುಖಾಂತರ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ! ಆ ವೇಳಾಗಾಗಲೇ ಆತನ ತಂದೆ-ತಾಯಿ ಮರಣ ಹೊಂದಿದ್ದರು. ಎಂಥ ವಿಪರ್ಯಾಸ!
-ಬಿ. ಸೋಮಶೇಖರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.