ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಶಿಷ್ಯಕೋಟಿ ನಿರ್ಮಿಸಿ

Parashurama
Updated On : 12 Mar 2013, 3:24 am

ವ್ಯಕ್ತಿಯ ಸಾಧನೆಯನ್ನು ಅವನು ಸಂಪಾದಿಸಿರುವ ನಾಗರಿಕ ಸೌಲಭ್ಯಗಳು ಮತ್ತು ಗಳಿಸಿರುವ ಹಣದಿಂದ ಅಳೆಯಲಾಗದು. ಅವನು ನಿರ್ಮಿಸಿರುವ ಶಿಷ್ಯಕೋಟಿಯೇ ಅವನ ಜೀವನದ ಒರೆಗಲ್ಲು. ಸದ್ಬುದ್ಧಿ ಮತ್ತು ಸದ್ಗುಣಗಳು ವ್ಯಕ್ತಿಗಳನ್ನು ಆಕರ್ಷಿಸಿದರೆ, ಒಳಿತನ್ನು ಕಂಡು ಪ್ರೋತ್ಸಾಹಿಸುವ ಗುಣ ವ್ಯಕ್ತಿಯನ್ನು ಗುರುಸ್ಥಾನಕ್ಕೇರಿಸುತ್ತದೆ. ಯಾವ ಕ್ಷೇತ್ರದಲ್ಲಾದರೂ ಸರಿಯೆ ಗುರುಸ್ಥಾನಕ್ಕೇರಿದ ವ್ಯಕ್ತಿ ತನ್ನತ್ತ ಬರುವ ಜನರ ಸದ್ಗುಣಗಳನ್ನು ಪೋಷಿಸಿ, ಬದುಕಿಗೆ ದಾರಿ ತೋರಿಸಿ ಶಿಷ್ಯೋತ್ತಮರನ್ನು ಹೊಂದುತ್ತಾನೆ. ಉದ್ಯಮಿಯಾದವನು ಸಮರ್ಥ ದುಡಿಮೆಗಾರರನ್ನು ಹೊಂದಿ ಅವರ ಜೀವನಕ್ಕೆ ಭದ್ರತೆ ಒದಗಿಸಿ, ದೇಶಕ್ಕೆ ಆಸ್ತಿಯನ್ನಾಗಿಸುವಂತೆ ಗುರುವಾದವನು ಚಿಂತನಶೀಲ ಶಿಷ್ಯರನ್ನು ನಿರ್ಮಿಸಿ, ಭವಿಷ್ಯದ ನಾಯಕರನ್ನಾಗಿ, ನೇತಾರರನ್ನಾಗಿ ಬೆಳೆಸುತ್ತಾನೆ. ಹೀಗೆ ಎಲ್ಲರೂ ಶಿಷ್ಯಕೋಟಿಯನ್ನು ನಿರ್ಮಿಸುವ ಪಣತೊಟ್ಟು, ಜೀವನಕ್ಕೆ ಅಡಿಯಿಡಬೇಕು.
'ಸಮಯ ಪಾಲನೆ ಮಾಡಬೇಕು. ಮಾಡುವ ಕೆಲಸ ಯಾವುದೇ ಆದರೂ ಅದು ಉನ್ನತಮಟ್ಟದ್ದಾಗಿರಬೇಕು. ಏಕಾಗ್ರತೆಯಿಂದ, ಕೌಶಲದಿಂದ ಕೆಲಸ ಮಾಡುವುದನ್ನು ಕಲಿಯಬೇಕು. ಅವರವರ ಶಕ್ತಿ ಸಾಮರ್ಥ್ಯಗಳಿಗನುಗುಣವಾಗಿ ಕೆಲಸ ಕಾರ್ಯಗಳನ್ನು ಹಂಚಬೇಕು. ಪ್ರತಿ ಕೆಲಸವೂ ಸಮರ್ಪಕವಾಗಿ, ಸಕಾಲದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಪ್ರತಿ ವಸ್ತುವೂ ಚೊಕ್ಕಟವಾಗಿರುವಂತೆ ನೋಡಿಕೊಳ್ಳಬೇಕು.'
ಮಾನವನ ಅಂತಃಶಕ್ತಿಯಲ್ಲಿ ಅಪಾರ ವಿಶ್ವಾಸ ಹೊಂದಿ, ಅಪ್ರತಿಹತವಾದ ಅಗ್ನಿಸದೃಶವಾದ ವಾಗ್ವೈಖರಿಯಿಂದ ಸ್ಫೂರ್ತಿಗೊಳಿಸುತ್ತಿರಬೇಕು.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments