ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜನರಲ್ ಸ್ಟೋರ್

Parashurama
Updated On : 17 Mar 2013, 3:01 am

ನಳವನ್ನು ತಿರುಗಿಸಿದಾಗ ನೀರು ಬರುತ್ತದೆ ಹೇಗೆ?
ದ್ರವಗಳು ತಮ್ಮ ಮಟ್ಟ ಕಾಯ್ದುಕೊಳ್ಳುತ್ತವೆ. ಇದು ನಿಯಮ. ಶುದ್ಧೀಕರಿಸಿದ ನೀರನ್ನು ಪಂಪುಗಳ ಸಹಾಯದಿಂದ ಎತ್ತರವಾದ ಟ್ಯಾಂಕಿನಲ್ಲಿ ಸಂಗ್ರಹಿಸುತ್ತಾರೆ. ಅಲ್ಲಿಂದ ಪ್ರಧಾನ ಪೈಪುಗಳ ಮೂಲಕ ಉಪಕೊಳವೆಗೆ ನೀರು ಬರುತ್ತದೆ. ಇವನ್ನು ಸರ್ವೀಸ್ ಎನ್ನುತ್ತಾರೆ. ಇದರಿಂದ 'ಕಪ್ಲರ್‌' 'ಟಿ' ಕಾಲರ್ ಎಲ್ಬೋಗಳ ಮೂಲಕ ಮನೆಗಳಿಗೆ ನೀರನ್ನು ಸರಬರಾಜು ಮಾಡುತ್ತಾರೆ.
ಈ ರೀತಿ ಬಂದ ನೀರನ್ನು ಮತ್ತೆ ಮನೆಯ ಟ್ಯಾಂಕರ್‌ನಲ್ಲಿ ಸಂಗ್ರಹಿಸುತ್ತಾರೆ. ಪ್ಲಂಬರ್‌ನ ಸಹಾಯದಿಂದ ಮನೆಗೆ ಬೇಕಾದಲ್ಲಿ ಎಲ್ಬೊ ಮತ್ತು 'ಟಿ'ಗಳನ್ನು ಉಪಯೋಗಿಸಿ, ನಲ್ಲಿಗಳನ್ನು ಹಾಕಿಸಿಕೊಂಡಿರುತ್ತಾರೆ. ಬೇಕಾದಲ್ಲಿ ಕಂಟ್ರೋಲ್ ವಾಲ್ವ್‌ಗಳು ಇರುತ್ತವೆ. ಅರ್ಧ ಎಚ್.ಪಿ. ಮೋಟರನ್ನು ಉಪಯೋಗಿಸಿ ನೀರನ್ನು ಮನೆಯ ಮೇಲಿನ ಸಿಂಟೆಕ್ಸ್‌ಗೆ ಪಂಪು ಮಾಡುತ್ತಾರೆ. ನೀರು ಎತ್ತರವಾದ ಸ್ಥಳದಲ್ಲಿ ಇರುವುದರಿಂದ ನಿಯಮದ ಪ್ರಕಾರ, ಮನೆಯಲ್ಲಿಯ ಯಾವ ಟ್ಯಾಪನ್ನು ಓಪನ್ ಮಾಡಿದರೂ ಅದರಲ್ಲಿ ನೀರು ಬರುತ್ತದೆ.

ಹಣ್ಣುಗಳು ಕೆಲವು ಹುಳಿ ಮತ್ತು ಕೆಲವು ಸಿಹಿ ಇರುತ್ತವೆ ಏಕೆ?
ವಿಭಿನ್ನ ರುಚಿಗಳಿರುವ ಹಣ್ಣುಗಳನ್ನು ನಾವು ನೋಡುತ್ತೇವೆ. ಹಣ್ಣಿನ ವಿಭಿನ್ನ ರುಚಿಗೆ ಕಾರಣವೇನು? ಇದು ಹಣ್ಣಿನಲ್ಲಿ ಇರುವ ವಸ್ತುಗಳ ಮೇಲೆ ಅವಲಂಬಿಸಿದೆ. ಒಂದು ಹಣ್ಣು ಸಿಹಿ ಇದ್ದರೆ ಅದರಲ್ಲಿ ಫ್ರುಕ್ಟೋಸ್‌ನ (ಸಕ್ಕರೆ) ಅಂಶ ಹೆಚ್ಚಿದೆ ಎಂದು ತಿಳಿಯಬೇಕು. ನಿಂಬೆಹಣ್ಣಿನಲ್ಲಿ ಆಮ್ಲ (ಸಿಟ್ರಿಕ್ ಆಮ್ಲ) ಹೆಚ್ಚಿದೆ. ಆದುದರಿಂದ ಅದು ಹುಳಿ. ಬಾಳೆಹಣ್ಣು ಪೂರ್ಣ ಹಣ್ಣಾಗದಿದ್ದಲ್ಲಿ, ಅದರಲ್ಲಿ ಪಿಷ್ಟ ಹೆಚ್ಚಾಗಿದ್ದು ಸಪ್ಪೆಯಾಗಿರುತ್ತದೆ. ಹಣ್ಣು ಮಾಗಿದಂತೆ, ಅದರಲ್ಲಿನ ಪಿಷ್ಟವು ಸಕ್ಕರೆಯಾಗಿ ಮಾರ್ಪಟು ಹೊಂದುತ್ತದೆ. ಎಲ್ಲಾ ಮಾವಿನ ಹಣ್ಣುಗಳೂ ಒಂದೇ ರುಚಿ ಇರುವುದಿಲ್ಲ. ಏಕೆಂದರೆ ರುಚಿಯ ವ್ಯತ್ಯಾಸವು ಹಣ್ಣಿನಲ್ಲಿ ವಿವಿಧ ವಸ್ತುಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments