ಮಿದುಳಿಗೂ ಕಸರತ್ತು ಬೇಕು
ನಾನು ಯಾರ ಜತೆನೂ ಜಾಸ್ತಿ ಮಾತ ನಾಡುವುದಿಲ್ಲ. ಆದರೂ ನನ್ನ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ. ದಯವಿಟ್ಟು ಪರಿಹಾರ ತಿಳಿಸಿ.
-ಪವನ ಕಲಾಲ, ಶಿರಸಂಗಿ
ಮಾತನಾಡುವುದನ್ನು ಕಡಿಮೆ ಮಾಡಿದರೆ ನೆನಪಿನ ಶಕ್ತಿ ಜಾಸ್ತಿಯಾಗುತ್ತದೆ ಎಂದು ನಿಮಗೆ ಯಾರು ಹೇಳಿದ್ದಾರೆ? ಬೇರೆಯವರ ಜತೆ ಮಾತನಾಡುವುದರಿಂದ ಹೆಚ್ಚು ಹೆಚ್ಚು ಒಳ್ಳೆಯ ವಿಷಯಗಳುಗೊತ್ತಾಗುತ್ತವೆ. ವಿಷಯದ ಚರ್ಚೆಯಿಂದ ಬುದ್ಧಿ ಚುರುಕಾಗುತ್ತದೆ. ವಿಷಯ ಸಂಗ್ರಹಣೆಯಿಂದ ಮಿದುಳಿಗೆ ಕೆಲಸ, ಕಸರತ್ತು ಸಿಕ್ಕಂತಾಗುತ್ತದೆ. ಇದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಆದ್ದರಿಂದ ಜನರ ಜತೆ ಬೆರೆತು, ಮಾತನಾಡುವುದನ್ನು ರೂಢಿಸಿಕೊಳ್ಳಿ. ನೆನಪಿಡಿ, ಅತಿಯಾದರೆ ಅಮೃತವೂ ವಿಷ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.