ಜನರಲ್ ಸ್ಟೋರ್
ಆಕಾಶದಲ್ಲಿ ಗುಡುಗು-ಮಿಂಚುಗಳು ಉಂಟಾಗಲು ಕಾರಣವೇನು?
ಮುಗಿಲಿನ ಪ್ರತಿಯೊಂದು ಕಣದಲ್ಲಿಯೂ ಧನ/ಋಣ ವಿದ್ಯುತ್ತಿನ ಚೇತನವಿರುತ್ತದೆ. ಆದರೆ ಒಂದು ಕಣದಸುತ್ತಲೂ ಅದಕ್ಕೆ ವಿರುದ್ಧವಾದ ವಿದ್ಯುತ್ಶಕ್ತಿ ಆವರಿಸಿಕೊಂಡಿದ್ದು, ಅದು ತಟಸ್ಥವಾಗಿರುತ್ತದೆ. ವಾತಾವರಣದ ಒತ್ತಡದಲ್ಲಿ ಅಧಿಕ ಬದಲಾವಣೆಯಾದಾಗ ಆಕಾಶದಲ್ಲಿಯ ಮೋಡದ ರಾಶಿಯು ಸಾವಿರಾರು ಅಡಿ ಎತ್ತರಕ್ಕೆ ಹೋಗಿ ನಿಲ್ಲುವುದು. ಆಗ ಗಾಳಿ ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಒತ್ತಡವುಂಟುಮಾಡುವುದು. ಇದರಿಂದಾಗಿ ಒಂದು ಕಡೆ ಋಣ ವಿದ್ಯುತ್ ಮತ್ತೊಂದು ಕಡೆ ಧನ ವಿದ್ಯುತ್ ಉಂಟಾಗುವುದು. ಇವು ಒಂದನ್ನೊಂದು ಕೂಡಿದಾಗ ಮಿಂಚು ಉಂಟಾಗುತ್ತದೆ. ಕೆಲವು ಸಲ ನೆಲದಲ್ಲಿಯ ಧನವಿದ್ಯುತ್ತಿಗೂ ಮುಗಿಲಿನಋಣ ವಿದ್ಯುತ್ತಿಗೂ ಸಂಪರ್ಕವುಂಟಾಗಿ ಮಿಂಚು ಮುಗಿಲಿನಿಂದ ನೆಲಕ್ಕೆ ಜಿಗಿಯುವುದು. ಮಿಂಚು ಉಂಟಾದ ಹಾದಿಯಲ್ಲಿ ಅಧಿಕ ಉಷ್ಣತೆಯುಂಟಾಗುವುದು. ಈ ಉಷ್ಣತೆಯು ಒಮ್ಮೆಲೇ ಉದ್ಭವಿಸುವುದರಿಂದ ಹಾದಿಯಲ್ಲಿಯ ವಾಯು ಸಂಸ್ತರವು ಹಿಗ್ಗಿ ಕಂಪಿಸುತ್ತದೆ. ಈ ವಾಯು ಕಂಪನವೇ ಗುಡುಗು.
ನಾವು ರೇಡಿಯೋ ಏರಿಯಲ್ಲನ್ನು ಮುಟ್ಟಿದಾಗ ಧ್ವನಿ ಹೆಚ್ಚಾಗಲು ಕಾರಣವೇನು?
ಏರಿಯಲ್ ಎಂಬುದು ವಿದ್ಯುದ್ವಾಹಕವಾದ ತಾಮ್ರದ ತಂತಿಯಿಂದ ಮಾಡಿದ ಒಂದು ಬಲೆ. ಇದು ಟ್ರಾನ್ಸಿಸ್ಟರ್ನಲ್ಲಿ ಒಂದು ಲೋಹದ ತುಂಡು ಆಗಿರುತ್ತದೆ. ಇದು ವಿದ್ಯುದಯಸ್ಕಾಂತೀಯ ಅಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿ ರೇಡಿಯೋಗೆ ಒದಗಿಸುತ್ತದೆ. ನಮ್ಮ ದೇಹವು ಸಹ ಒಳ್ಳೆಯ ವಿದ್ಯುದ್ವಾಹಕ. ನಾವು ಏರಿಯಲ್ಲನ್ನು ಮುಟ್ಟಿದಾಗ ಅಧಿಕ ಪ್ರಮಾಣದಲ್ಲಿ ವಿದ್ಯುದಯಸ್ಕಾಂತೀಯ ಅಲೆಗಳನ್ನು ರೇಡಿಯೋಕ್ಕೆ ಒದಗಿಸಿದಂತಾಗುತ್ತದೆ. ಈ ಕಾರಣದಿಂದಾಗಿ ರೇಡಿಯೋದಲ್ಲಿ ಹೆಚ್ಚಿನ ಧ್ವನಿಯುಂಟಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.