ಸದಾ ಚಟುವಟಿಕೆಯಿಂದಿರಿ (ಹಾರ್ಡ್ವರ್ಡ್)
ಮಧ್ಯ ವಯಸ್ಸು ದಾಟಿದ ನನಗೆ ಮಂಡಿನೋವು ಕಾಡುತ್ತಿದೆ. ಮನೆ ಯಲ್ಲಿ ಯಾರೂ ನನ್ನ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಜೀವನವೇ ಬೇಜಾರಾಗಿ ಬಿಟ್ಟಿದೆ. ಏನು ಮಾಡಲಿ?
- ಶಾರದಾಮಣಿ, ಚಿಕ್ಕಬಾಣಾವರ
ನಿಮ್ಮ ಬಗ್ಗೆ ಯಾರೂ ಕಾಳಜಿ ತೋರಿಸುತ್ತಿಲ್ಲ ಎಂಬ ಕೊರಗು ನಿಮಗೆ. ಅದನ್ನು ಮನಸ್ಸಿನಿಂದ ಕಿತ್ತು ಹಾಕಿ. ಎಲ್ಲರೂ ಅವರವರ ಕೆಲಸದಲ್ಲಿ ಮುಳುಗಿರುತ್ತಾರೆ. ಈಗೋ ಬಿಟ್ಟು ನಿಮ್ಮ ತೊಂದರೆಗಳನ್ನು ನೀವಾಗೇ ಹೇಳಿಕೊಳ್ಳಿ. ಖಂಡಿತ ಸಹಾಯ ಮಾಡುತ್ತಾರೆ. ನೀವು ಪ್ರತಿದಿನ ವಾಕಿಂಗ್, ನಿಮ್ಮ ವಯಸ್ಸಿನವರ ಜತೆ ಸ್ನೇಹ, ನಿಮ್ಮದೇ ಹವ್ಯಾಸ ಇಟ್ಟುಕೊಳ್ಳಿ. ನೀವೂ ಸದಾ ಚಟುವಟಿಕೆಯಿಂದಿರಿ. ಮಂಡಿನೋವು ಮಾಯವಾಗದಿದ್ದರೆ ಕೇಳಿ. ಹಾಗಂತ ಡಾಕ್ಟರ್ರಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಮರೆಯದಿರಿ.
ಡಾ. ಸ್ಯಾಟಲೈಟ್