ಬಿ.ಸಿ.ಪಾಟೀಲ್ -ನಟ, ರಾಜಕಾರಣಿ
1.'ಖಾಕಿ'ಯಲ್ಲಿದ್ದ ನಿಮ್ಮನ್ನು 'ಗಾಂಧಿನಗರ'ಕ್ಕೆ ಕರೆತಂದವರು ಯಾರು?
'ವಾಕಿ ಟಾಕಿ'ಯಲ್ಲಿ ಯಾರೋ ಕರೆದಂತಾಯ್ತು, ಬಂದೆ.
2. ಚಿತ್ರರಂಗ ಮತ್ತು ರಾಜಕೀಯ ರಂಗದ ಬಗ್ಗೆ ನಿಮ್ಮ ಅಭಿಪ್ರಾಯ?
ಅಲ್ಲಿ 'ಬಣ್ಣ' ಇಲ್ಲದೆ ಬದುಕಿಲ್ಲ. ಇಲ್ಲಿ 'ಬಣ್ಣದ ಮಾತು' ಇಲ್ಲದೆ ಏನೂ ಆಗಲ್ಲ.
3. ಖಾಕಿ, ಖಾದಿ ತೊಟ್ಟು ಆ ಎರಡು ಕ್ಷೇತ್ರಗಳ ಒಳ-ಹೊರಗು ನೋಡಿರುವ ನಿಮಗೆ ಈಗ ಏನನಿಸುತ್ತೆ?
'ಖಾಕಿ ಖದರ್ ಖಾದಿ ದರ್ಬಾರ್' ಅಂತ ಸಿನಿಮಾ ಮಾಡಬಹುದು ಅನ್ನಿಸುತ್ತೆ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ