ಪ್ರಭು ಹೆಜ್ಜೆಗೆ ಬೆದರಿದ ಕಿಂಗ್‌ಖಾನ್
ಶಾರುಖ್ ಖಾನ್‌ಗೆ ಪ್ರಭುದೇವ್ ಕಂಡರೆ ಎಂಥಾ ಹೆದರಿಕೆ ನೋಡಿ! ತನ್ನ 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದ ಐಟಂ ಸಾಂಗ್‌ಗೆ ನೃತ್ಯ ಸಂಯೋಜಿಸಬೇಕಿದ್ದ ಪ್ರಭುದೇವ್ ಅವರನ್ನು ಬದಲಿಸಿದ ಶಾರುಖ್, ಪ್ರಭು ಬದಲು ಆತನ ಹಿರಿಯ ಸಹೋದರ ರಾಜು ಸುಂದರಂಗೆ ಅವಕಾಶ ನೀಡಿದ್ದಾರೆ. ರಾಜು ಕೂಡ ಕೋರಿಯೊಗ್ರಫಿಯಲ್ಲಿ ಹೆಸರು ಮಾಡಿದವರೇ.
ಶಾರುಖ್ ಭಯ ಏನೆಂದರೆ 'ಪ್ರಭು ರಿಸ್ಕಿ ಸ್ಟೆಪ್‌ಗಳನ್ನು ಹಾಕಿಸುತ್ತಾರೆ' ಎನ್ನುವುದು. 'ನಾನೀಗ ಆ ಥರ ಕುಣಿಯಲಾರೆ. ಅದನ್ನು ಪ್ರಭುಗೆ ಮನವರಿಕೆ ಮಾಡಿಕೊಟ್ಟ ಬಳಿಕವೇ ರಾಜು ಅವರನ್ನು ಆಯ್ಕೆ ಮಾಡಿರುವುದು' ಎನ್ನುವುದು ಕಿಂಗ್‌ಖಾನ್ ಹೇಳಿಕೆ.
ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಸುದ್ದಿ ಎಂದರೆ, ಐಟಂ ಸಾಂಗ್‌ನಲ್ಲಿ ಶಾರುಖ್‌ಗೆ ಸಾಥ್ ನೀಡಬೇಕಿದ್ದವಳು ನಯನತಾರಾ. ಈಗ ಆ ಅದೃಷ್ಟ ಕನ್ನಡದ ಹುಡುಗಿ ಪ್ರಿಯಾಮಣಿಗೆ ಸಿಕ್ಕಿದೆ ಎನ್ನುವುದು!