ತದಿಯಾರಾಧನೆ
ಬ್ರಿಟಿಷರ ಆಡಳಿತ ಕಾಲದಲ್ಲಿ ಬೆಂಗಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ.ಬಲರಾಮ ನಾಯ್ಡು ಎಂಬವರು, ಕೊಡುಗೈದಾನಿಯಾಗಿ ಪ್ರಸಿದ್ಧರಾಗಿದ್ದರು. ತಮ್ಮ ಆಪ್ತರಾದ ರಾಮಾನುಜ ದಾಸರಿಂದ ಪ್ರೇರಣೆ ಪಡೆದು ಮೇಲುಕೋಟೆಯಲ್ಲಿ ಛತ್ರವೊಂದನ್ನು ಕಟ್ಟಿಸಿದರು. ಅಲ್ಲಿಗೆ ಅದು ಮೊದಲ ಛತ್ರ. ಬ್ರಹ್ಮೋತ್ಸವದ ವೇಳೆ ಹತ್ತು ದಿನ ತದಿಯಾರಾಧನೆ ಕೈಂಕರ್ಯ ಕೈಗೊಂಡು ಭಕ್ತಾದಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಮಾಡುತ್ತಿದ್ದರು. ರಾಜಮುಡಿ ಉತ್ಸವವನ್ನು ಛತ್ರಕ್ಕೆ ಕರೆಸಿಕೊಂಡು ಪೂಜಿಸುತ್ತಿದ್ದರು.
ಈ ತದಿಯಾರಾಧನೆ 76 ವರ್ಷಗಳಿಂದ ನಡೆದು ಬರುತ್ತಿದೆ. ಈಗ ಅದು 5 ದಿನಗಳಿಗೆ ಸೀಮಿತವಾಗಿದೆ. ತದಿಯಾರಾಧನೆ ಎಂದರೆ ಅನ್ನದಾನ ಎಂದರ್ಥ. ಬಲರಾಮ್ ನಾಯ್ಡು ಕಾಲಾನಂತರ ಅವರ ಮಗ ಜಿ.ಬಿ.ಲಕ್ಷ್ಮೀಪತಿ- ಸುಲೋಚನ ದಂಪತಿ, ನಂತರ ನಾಯ್ಡು ಮಗಳ ಮಗ ಎಸ್.ಡಿ.ಶ್ರೀಹರಿ- ಉಷಾರಾಣಿ ದಂಪತಿ ಈ ಸೇವೆ ಮುನ್ನಡೆಸುತ್ತಿದ್ದಾರೆ. 'ಶ್ರೀ ಆಂಡಾಳ್ ರಾಮಾನುಜ ಕೂಟಂ' ಹೆಸರಿನಲ್ಲಿ ಸೇವೆ ನಡೆಯುತ್ತಿದೆ. ಚೆಲುವರಾಯಸ್ವಾಮಿ ದೇವಾಲಯದ ಹಿಂಬದಿಯಲ್ಲಿರುವ ಈ ಛತ್ರದಲ್ಲಿ ಈ ವರ್ಷವೂ ತದಿಯಾರಾಧನೆ ವ್ಯವಸ್ಥಿತವಾಗಿ ನಡೆದಿದೆ. 76 ವರ್ಷಗಳಿಂದ ಉಚಿತವಾಗಿ ನಡೆಸಲಾಗುತ್ತಿರುವ ಈ ಸೇವೆಗೆ ಕುಟುಂಬಸ್ಥರು ಕೈಯಿಂದ ಹಣ ಹಾಕುತ್ತಾರೆ ಹೊರತು ಭಕ್ತರಿಂದ ಪಡೆಯುವುದಿಲ್ಲ ಎಂಬುದು ವಿಶೇಷ. ಶ್ರೀಹರಿ ಅವರ ಸಂಪರ್ಕ: 9448855965
-ಎಚ್.ಆನಂದರಾಮ ಶಾಸ್ತ್ರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.