ವೈಚಾರಿಕ ಪ್ರಜ್ಞೆಯಡಿ ಧರ್ಮದ ಅನುಷ್ಠಾನ
ಧರ್ಮ ಬೆಳಕಿನ ಹಾಗೆ ಸರ್ವವ್ಯಾಪಕ. ಎಲ್ಲರೂ ಅವರವರ ಧರ್ಮಕ್ಕನುಗುಣವಾಗಿ ನಡೆಯುತ್ತಾರೆ. ಆದರೆ ಎಲ್ಲ ಧರ್ಮಗಳ ವೈಚಾರಿಕ ಮುಖ ಒಂದೇ ಆಗಿದ್ದರೂ ಆಚರಣೆಯ ಮುಖ ಮಾತ್ರ ವೈವಿಧ್ಯದಿಂದ ಕೂಡಿದೆ. ಇದೇ ಧರ್ಮಗಳಲ್ಲಿ ವಿಭಿನ್ನತೆ ಕಾಣಲು ಪ್ರಮುಖ ಕಾರಣ. ವಿಚಾರಮಾರ್ಗವನ್ನು ಅನುಸರಿಸಬೇಕಾದ ಜನರು ಆಚಾರ ಮಾರ್ಗದಲ್ಲಿ ನಡೆಯುತ್ತಿರುವುದರಿಂದ ಧರ್ಮ ಕಾಲ ಮತ್ತು ಸ್ಥಳಕ್ಕೆ ತಕ್ಕಂತೆ ಭಿನ್ನವಾಗುತ್ತಾ ಹೋಗುತ್ತದೆ.
ಒಬ್ಬಳು ವಿಧವೆಯ ಕಣ್ಣೀರನ್ನು ಒರೆಸಲಾರದ ಅಥವಾ ಅನಾಥ ಶಿಶುವಿಗೆ ಒಂದು ತುತ್ತು ಅನ್ನವನ್ನು ಉಣಿಸಲಾರದ ದೇವರಲ್ಲೂ ಧರ್ಮದಲ್ಲೂ ನನಗೆ ನಂಬಿಕೆಯಿಲ್ಲ. ಬೋಧನೆಗಳು ಎಷ್ಟೇ ಉದಾತ್ತವಾಗಿರಲಿ, ತತ್ತ್ವಗಳು ಎಷ್ಟೇ ಅಚ್ಚುಕಟ್ಟಾಗಿ ಬೆಸೆದಿರಲಿ, ಎಲ್ಲಿಯವರೆಗೆ ಆ ಧರ್ಮವು ಕೇವಲ ಪುಸ್ತಕಗಳಿಗೆ ಮತ್ತು ಸಿದ್ಧಾಂತಗಳಿಗೆ ಸೀಮಿತವಾಗಿರುತ್ತದೆಯೋ ಅಲ್ಲಿಯವರೆಗೆ ಅದನ್ನು ನಾನು ಧರ್ಮವೆಂದು ಕರೆಯುವುದಿಲ್ಲ,.
ಪ್ರೀತಿಯೆಂದೂ ಸೋಲುವುದಿಲ್ಲ. ಪ್ರೇಮವೇ ಎಂದೂ ವಿಜಯಿಯಾಗುವುದು. ದುಃಖಿಗಳು, ದರಿದ್ರರು, ದುರ್ಬಲರೆಲ್ಲ ದೇವರಲ್ಲವೆ? ಅವರನ್ನೇಕೆ ಮೊದಲು ಪೂಜಿಸಬಾರದು? ಗಂಗಾ ತೀರದಲ್ಲಿ ಬಾವಿ ತೋಡುವುದೇಕೆ? ಪ್ರೇಮದ ಸರ್ವವ್ಯಾಪಕತ್ವದಲ್ಲಿ ನಂಬಿಕೆಯಿಡು, ನಿನ್ನಲ್ಲಿ ಪ್ರೀತಿಯಿದೆಯೇ? ಹಾಗಿದ್ದರೆ ನೀವು ಸರ್ವಶಕ್ತ. ನೀವು ಸಂಪೂರ್ಣ ನಿಸ್ವಾರ್ಥಿಯೇ? ಹಾಗಾದರೆ ನೀವು ಅಪ್ರತಿಹತ, ಎಲ್ಲೆಡೆಯೂ ನಿನಗೆ ನೆರವಾಗುವುದು ನಿನ್ನ ಶೀಲವೊಂದೇ.
-ಆನಂದ ಎಸ್.ಎನ್.