ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜನರಲ್ ಸ್ಟೋರ್

Rashmi Kasaragodu
Updated On : 26 Mar 2013, 12:32 pm

ಸುನಾಮಿ ಎಂದರೆ ಏನು? ಅದರಿಂದಾಗುವ ಅನಾಹುತ ಎಂಥಾದ್ದು ಎಂಬುದು ಗೊತ್ತೇ?
ಇದಕ್ಕೆ ಕಾರಣ ಭೂಮಿಯ ಆಳದಲ್ಲಿ ಭೂಮಿಯ ಪದರಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಇದು ಸಾಗರ ಅಥವಾ ಸಮುದ್ರದ ತಳಭಾಗದಲ್ಲಿ ಉಂಟಾದಾಗ ಸಮುದ್ರದ ನೀರಿನಲ್ಲಿ ದೈತ್ಯಾಕಾರದ ಅಲೆಗಳು ಎದ್ದು ಭೂಮಿ ಕಡೆ ಅಪ್ಪಳಿಸುತ್ತದೆ.  2008ರಲ್ಲಿ ಸುನಾಮಿ ಹೊಡೆತಕ್ಕೆ ಸಿಲುಕಿ ಅಂಡಮಾನ್, ನಿಕೋಬಾರ್ ದ್ವೀಪಗಳ ಕಥೆ ನೀವು ಓದಿರಬಹುದು. ಎಲ್ಲಿ ನೋಡಿದರೂ ನೀರು. ನಿಲ್ಲಲು ಸ್ಥಳ ಇಲ್ಲ. ಜನರ ಸಾವು, ಸಮುದ್ರದ ದಂಡೆಗೆ ಇದ್ದ ನೂರಾರು ಬೋಟುಗಳು ಮೂವತ್ತು ಅಡಿ ಎತ್ತರದ ಅಲೆಗಳ ಹೊಡೆತಕ್ಕೆ ಸಿಲುಕಿ ನುಚ್ಚುನೂರಾಗಿತ್ತು. ಊರಿಗೆ ಊರೇ ನಾಮಾವಶೇಷವಾಗಿತ್ತು. ಅಲ್ಲಿಯ ಸುಮಾರು ಐದು ಸಾವಿರ ಜನರು ದಿಕ್ಕಾಪಾಲಾಗಿ ಓಡಿದ್ದರು. ಸತ್ತವರ ಕುಟುಂಬದ ಆರ್ತನಾದ ಕರುಳು ಹಿಂಡುತ್ತಿತ್ತು. ಸತ್ತವರ ದೇಹಗಳು ಕೊಳೆತು ನಾರುತ್ತಿದ್ದವು. ತಮಿಳುನಾಡಿನ ಕಡಲ ತೀರದಲ್ಲಿ ಬಲೆ ಬೀಸಿದಾಗ ಸಹಸ್ರಾರು ಮೀನುಗಳ ಬದಲು ಸಾಲುಸಾಲಾಗಿ ಶವಗಳು ಬರುತ್ತಿದ್ದವು.
ಅತ್ಯುತ್ತಮ ಬೀಚುಗಳಲ್ಲಿ ಒಂದಾದ ಸಿಲ್ವರ್ ಬೀಚ್ ಸುನಾಮಿ ಹೊಡೆತಕ್ಕೆ ಸಿಕ್ಕು ಅವಶೇಷವೇ ಇಲ್ಲವಾಗಿತ್ತು. ಸುನಾಮಿಯಿಂದ ಆದ ಅನಾಹುತವನ್ನು ಬರೆಯಲು ಸಾಧ್ಯವಿಲ್ಲ. ಅದೊಂದು ಪ್ರಕೃತಿಯ ರೌದ್ರಾವತಾರ ಎಂದು ಹೇಳಬಹುದು. ಸುನಾಮಿಯ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಸಾರಲಾಯಿತು. ಆದ ನಷ್ಟ ಸಾವಿರ ಕೋಟಿ ರು.ಗೂ ಅಧಿಕ. ದೇಶದ ಎಲ್ಲ ಕಡೆಯಿಂದ ನೆರವಿನ ಮಹಾಪೂರವೇ ಬಂತು. ದೇವರೇ ಇನ್ನೊಮ್ಮೆ ಇಂಥ ಸುನಾಮಿ ಬಾರದಂತೆ ಕಾಪಾಡು ಎಂದು ಪ್ರಾರ್ಥಿಸೋಣ.
ಚಂದ್ರನ ಮೇಲೆ ಎಂಥ ದೊಡ್ಡ ಸ್ಫೋಟವಾದರೂ ಅದು ನಮಗೆ ಕೇಳಿಸಲಾರದು. ಇದಕ್ಕೆ ಕಾರಣವೇನು?
ಧ್ವನಿಯು ಪ್ರಸಾರವಾಗಲು ಒಂದು ಮಾಧ್ಯಮ ಅವಶ್ಯಕ. ನಿರ್ವಾತ ಪ್ರದೇಶದಲ್ಲಿ ಧ್ವನಿಯು ಪ್ರಸಾರವಾಗಲಾರದು. ಚಂದ್ರನ ಮೇಲೆ ಏನೇನೂ ವಾತಾವರಣ ಇರಲಾರದೆಂದು ವಿಜ್ಞಾನಿಗಳ ಅಭಿಪ್ರಾಯ. ಆದುದರಿಂದ ಚಂದ್ರನ ಮೇಲೆ ಎಂತಹ ದೊಡ್ಡ ಸ್ಫೋಟವಾದರೂ ನಮಗೆ ಕೇಳಿಸುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments