ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

'ಸಮರ್ಥನಂ'ನ ಹೊಸ ಶಾಲೆ

Rashmi Kasaragodu
Updated On : 26 Mar 2013, 12:31 pm

ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಈಗ ಮತ್ತೊಂದು ಸಾಧನೆಗೆ ಕೈಹಾಕಿದೆ. ಸಮರ್ಥನಂನ ಬುದ್ಧಿ ವಿಕಲಚೇತನ ಮಕ್ಕಳಿಗಾಗಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ತೆರೆದಿದೆ. ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಈ ಶಾಲೆಯಲ್ಲಿ ಶಿಕ್ಷಣ ಉಚಿತ. ಇದರ ಜತೆಗೆ ಸಮರ್ಥನಂ ಬನ್ನೇರುಘಟ್ಟ ಸಮೀಪವಿರುವ ಹುಳಿಮಾವು ಸೋಮೇಶ್ವರ ಬಡಾವಣೆಯಲ್ಲಿ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಉಚಿತ ವಸತಿ ಪ್ರೌಢಶಾಲೆಯನ್ನು ಆರಂಭಿಸಿದೆ.
2013-14ನೇ ಸಾಲಿನ ತರಗತಿ ದಾಖಲಾತಿಗಳನ್ನು ಈಗಾಗಲೇ ಆರಂಭಿಸಲಾಗಿದೆ. 1ರಿಂದ 10ನೇ ತರಗತಿವರೆಗಿನ ಬುದ್ಧಿವಿಕಲಚೇತನ ಮಕ್ಕಳು ಈ ಶಾಲೆಗಳಲ್ಲಿ ಶಿಕ್ಷಣ ಪಡೆಯಬಹುದು. ಸೀಟುಗಳು ಸೀಮಿತವಾಗಿರುವುದರಿಂದ ಮೊದಲು ಬಂದವರಿಗೆ ಆದ್ಯತೆ.
ಸಮರ್ಥನಂ ತನ್ನ ಶಾಲೆಗಳಲ್ಲಿ ಅನುಭವಿ ಶಿಕ್ಷಕರನ್ನು ಹೊಂದಿದೆ. ಕಂಪೂಟರ್ ಲ್ಯಾಬ್, ಸ್ಪೋಕನ್ ಇಂಗ್ಲೀಷ್ ಕೋರ್ಸ್, ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ವಿಶೇಷ ಟ್ಯೂಷನ್ ವ್ಯವಸ್ಥೆ ಕೂಡ ಸಮರ್ಥನಂನಲ್ಲಿದೆ.
ಸಮರ್ಥನಂ ಹಿರಿಯ ಪ್ರಾಥಮಿಕ ಶಾಲೆ ಸೇರಬಯಸುವವರು- ನಂ. 39, 15ನೇ ಅಡ್ಡರಸ್ತೆ, 16ನೇ ಮುಖ್ಯರಸ್ತೆ, 4ನೇ ಹಂತ, ಎಚ್‌ಎಸ್‌ಆರ್ ಬಡಾವಣೆ, ಬೆಂಗಳೂರು. 080-25721444, 9901868801, 94449864780 ಸಂಪರ್ಕಿಸಿ.
ಉಚಿತ ವಸತಿ ಶಾಲೆಗೆ- ನಂ. 9, ರೆಡ್ಡಿ ಬಿಲ್ಡಿಂಗ್, ಸೋಮೇಶ್ವರ ಬಡಾವಣೆ, ಹುಳಿಮಾವು, ಬನ್ನೇರುಘಟ್ಟ ರಸ್ತೆ, ಬೆಂಗಳೂರು. 080-264480589, 9449864776, 98880247209 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement