ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಮಸ್ಯೆಗಳನ್ನು ಪರಿಹರಿಸುವ ದಾರಿ...

Rashmi Kasaragodu
Updated On : 26 Mar 2013, 12:33 pm

ವ್ಯವಸ್ಥೆಯನ್ನು ಸುಗಮಗೊಳಿಸುವವರಿಗಿಂತ ವಿಕೃತಗೊಳಿಸುವವರೇ ಹೆಚ್ಚು. ಅದೇ ರೀತಿ ಸಮಸ್ಯೆಗಳಿಗೆ ಪರಿಹಾರ ರೂಪಿಸುವವರಿಗಿಂತ ಜಟಿಲಗೊಳಿಸುವವರೇ ಅಧಿಕ. ಏಕೆಂದರೆ ಸಮಸ್ಯೆಗಳನ್ನು ಜೀವಂತವಾಗಿ ಉಳಿಸಿಕೊಳ್ಳುವುದರಲ್ಲಿ ತಮ್ಮ ಉಳಿವಿದೆ ಎಂದು ಭಾವಿಸುತ್ತಾರೆ. ಉದಾಹರಣೆಗೆ ಭಾರತ ಸಮಾಜದ ಜಾತಿ ವ್ಯವಸ್ಥೆ, ಬಡತನ, ಅನಕ್ಷರತೆ ಇವುಗಳು ಜೀವಂತವಾಗಿರುವಷ್ಟು ಕಾಲ ಪಟ್ಟಭದ್ರ ನಾಯಕರು ಶಾಶ್ವತವಾಗಿ ತಮ್ಮ ಸ್ಥಾನಗಳಲ್ಲಿ ಭದ್ರವಾಗಿರುವರು.
ರೋಗದ ಲಕ್ಷಣಗಳನ್ನು ಮಾತ್ರ ಪರಿಹರಿಸುವ ಔಷಧಗಳು ರೋಗವನ್ನೇ ಗುಣಪಡಿಸಲಾರವು. ಬದಲಾಗಿ ಅವು ರೋಗವನ್ನು ಮತ್ತಷ್ಟು ಹದಗೆಡಿಸಬಹುದು, ಇಲ್ಲವೇ ತಕ್ಷಣದಲ್ಲೋ ಕಾಲಾಂತರದಲ್ಲೋ ಇತರ ಸಮಸ್ಯೆಗಳನ್ನುತಂದೊಡ್ಡಬಹುದು. ಅಂತೆಯೇ ಯಾವುದೇ ಸಮಸ್ಯೆಯ ಬಾಹ್ಯ ಲಕ್ಷಣಗಳನ್ನು ಮಾತ್ರ ನಿರ್ಮೂಲ ಮಾಡುವ ಉಪಾಯಗಳಿಂದ ತಕ್ಷಣಕ್ಕೆ ಆ ಸಮಸ್ಯೆ ಪರಿಹಾರವಾದಂತೆ ಕಂಡುಬಂದರೂ, ಅದರ ಬೇರುಗಳು ಜೀವಂತವಾಗಿದ್ದು ಮತ್ತೊಮ್ಮೆ ಅದು ತಲೆಯೆತ್ತುತ್ತದೆ.
ಮಾನವನ ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವಾಗಲೂ ಅದರ ಮೂಲಕ್ಕೆ ಹೋಗಿ, ಅದನ್ನು ಶಾಶ್ವತವಾಗಿ ನಿರ್ಮೂಲ ಮಾಡುವಂತಹ ಪರಿಹಾರವನ್ನು ರೂಪಿಸಿ.
ಹಿಂದೂ ಸಮಾಜವು ಮುಕ್ತ ಸಮಾಜವಾಗಿರದೆ ಅನೇಕ ಶತಮಾನಗಳಿಂದಲೂ ಸಂಪ್ರದಾಯಗಳ ಕೂಪದಿಂದ ಮೇಲೆದ್ದು ನಿಲ್ಲದಿದ್ದುದೇ ಭಾರತದ ಸಕಲ ಸಮಸ್ಯೆಗಳಿಗೆ ಮೂಲ ಕಾರಣ.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement