ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಿಟ್ಟು ಎದುರಿಸುವ ಬಗೆ

Rashmi Kasaragodu
Updated On : 26 Mar 2013, 12:30 pm

'ಸಿಟ್ಟು ಬಂದರೆ ನಾನು ಮನುಷ್ಯನೇ ಅಲ್ಲ' ಅಂತ ಹೇಳಿಕೊಳ್ಳುತ್ತಿರುತ್ತಾರಲ್ಲ, ಅಂಥವರನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಉಪ್ಪಿಟ್ಟಿಗೆ ಉಪ್ಪು ಜಾಸ್ತಿಯಾಯ್ತು, ಕಾಫಿಗೆ ಸಕ್ಕರೆ ಹಾಕಿಲ್ಲ, ಮಗ ಟಿವಿ ನೋಡುತ್ತಾ ಕೂತಿದ್ದಾನೆ, ಮಗಳು ಕ್ಲಾಸಿನಿಂದ ಬರುವಾಗ ಕೊಂಚ ತಡವಾಗಿದೆ- ಇಂಥ ಕಾರಣಗಳೇ ಸಾಕು ಅವರ ಸಿಟ್ಟಿಗೆ. ಅಂದೆಲ್ಲಾ ಕುಟುಂಬದ ಸದಸ್ಯರ ಮೇಲೆ, ಮನೆಯ ಮಾಡು ಎಗರಿಹೋಗುವಂತೆ ಚೀರುತ್ತಿರುತ್ತಾರೆ. ಬೀದಿಯ ನಲ್ಲಿ ಕೆಟ್ಟು ಹೋಗಿದೆ, ತಿಪ್ಪೆಯ ಕಸ ಇನ್ನೂ ತೆಗೆದಿಲ್ಲ, ಪೊಲೀಸ್ ಮಾಮೂಲಿ ಕೇಳ್ತಿದಾನೆ ಎಂಬ ಕಾರಣಕ್ಕಾಗಿ ರೇಗಿ ತಿದ್ದಿ ಸರಿದಾರಿಗೆ ತರುತ್ತಾರಾ ನೋಡಿ? ಊಹುಂ. ಅವರ ಕೋಪ ಏನಿದ್ದರೂ ಚಿಲ್ಲರೆ ವಿಷಯಕ್ಕಾಗಿಯೇ ಇರುತ್ತದೆ. ಅದು ಪ್ರಯೋಜನವಿಲ್ಲದ ತಾಮಸ ಕ್ರೋಧವೇ ಹೊರತು, ಉಪಯೋಗಕಾರಿಯಾದ ಸಾತ್ವಿಕ ಸಿಟ್ಟಲ್ಲ. ಅದೇ ಸಿಟ್ಟನ್ನು ರಚನಾತ್ಮಕವಾಗಿ ಯಾಕೆ ಉಪಯೋಗಿಸಬಾರದು? ಅದರಿಂದ ನಮಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು. ಆ ಬಗ್ಗೆ ಚಿಂತಿಸಿ. ಇನ್ನೊಂದೆಂದರೆ, ನಾವು ಯಾರ ಮೇಲೆ ಸಿಟ್ಟು ಕಾರಿಕೊಂಡಿದ್ದೇವೋ ಅವರು ನಮಗೆ ಹೇಗೆ ಕಾಣುತ್ತಾರೆ ಅನ್ನೋದನ್ನೂ ನೋಡಿ. ನಮಗೆ ಸಿಟ್ಟು ಬಂದಾಗ, ಎದುರಿಗಿರುವವರಲ್ಲಿ ಕೆಟ್ಟ ಗುಣಗಳೇ ನಮಗೆ ಕಾಣಿಸಲಾರಂಭಿಸುತ್ತವೆ. ಒಳ್ಳೆಯ ಗುಣಗಳೆಲ್ಲ ಆ ಕ್ಷಣಕ್ಕೆ ಕಾಣಿಸಿಕೊಳ್ಳದೆ ಹೋಗುತ್ತವೆ. ಇದರಿಂದ ಕ್ರೋಧ ವರ್ಧಿಸುತ್ತ ಹೋಗುತ್ತದೆ. ಇದಕ್ಕೊಂದು ಸುಲಭ ಪರಿಹಾರವಿದೆ. ಆ ಕ್ಷಣವೇ ಅವರ ಒಳ್ಳೆಯ ಗುಣಗಳನ್ನು ಪಟ್ಟಿ ಮಾಡಲು ಆರಂಭಿಸುವುದು. ಒಳ್ಳೆಯ ಗುಣಗಳ ಕೈ ಮೇಲಾಗುತ್ತಿದ್ದಂತೆ, ಒಂದು ಕೆಟ್ಟ ಗುಣದಿಂದ ನಿಮ್ಮಲ್ಲಿ ಉದ್ಭವಿಸಿದ ಸಿಟ್ಟನ್ನು ಹಲವಾರು ಒಳ್ಳೆಯ ಗುಣಗಳು ಸೇರಿ ಎದುರಿಸುತ್ತವೆ. ಇದು ಸಿಟ್ಟನ್ನು ಎದುರಿಸುವ ಅತ್ಯಂತ ಪ್ರಾಕ್ಟಿಕಲ್ ವಿಧಾನ. ಬೋಧಿಸತ್ವ ಹೇಳಿದ ವಿಧಾನವೂ ಇದೇ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement