ಮೂಡುಹಾಡು
ಇದರಲ್ಲಿ ನಮ್ಮ ಮೂಡ್ ಹೇಗಿದೆ ಎಂದು ಪತ್ತೆ ಮಾಡುವ ಡಿಟೆಕ್ಟಿವ್ ಸಾಫ್ಟ್ವೇರ್ ಇದೆ.
ಥತ್ತೇರಿಕೆ!
ಆ ಎಫೆಮ್ಮೋರು ಹಾಕೋ ಸಾಂಗ್ ಕೇಳಿ, ನಿಮ್ಮ ಮೊಬೈಲಿನ ಫೋಲ್ಡರ್ನಲ್ಲಿ ಕೂತ ಹಾಡುಗಳನ್ನು ಕೇಳಿ ಕೇಳಿ ಎಷ್ಟೋ ಸಲ ನಿಮಗೆ ಹಾಗನ್ಸಿದೆ. 'ಮೂಡಿಗೆ ತಕ್ಕಂತೆ ಹಾಡ್ ಹಾಕ್ರೋ' ಅಂತ ಮನಸ್ಸು ಬಡಿದುಕೊಳ್ಳಲು ಶುರುಮಾಡಿದ್ರೂ ನಿಮ್ಮ ಕೂಗು ಅವರಿಗೆ ಕೇಳ್ಸೋದಿಲ್ಲ. ಬಿಡಿ, ಅದೇ ಡಬ್ಬ ಸಾಂಗ್ಗಳೇ ಕಿವಿ ತುಂಬಿಕೊಳ್ತವೆ. ಹಾಗಾದ್ರೆ ನಮ್ಮ ಮೂಡಿಗೆ ಸರಿಹೊಂದುವಂತೆ ಹಾಡುಗಳು ಪ್ಲೇ ಆಗೋ ಕಾಲ ಯಾವಾಗ?
ಚಿಂತೆ ಬೇಡ. ಅದೇ ಕಾಲದಲ್ಲಿ ನಾವಿದ್ದೇವೆ. ನಮ್ಮ ಮೆದುಳಿನ ಭಾವನೆಗಳಿಗೆ ತಕ್ಕಂತೆ 'ಮೈಕೋ ಮೈಂಡ್ ರೀಡಿಂಗ್ ಹೆಡ್ಫೋನ್' ಹಾಡುಗಳನ್ನು ಪ್ಲೇ ಮಾಡುತ್ತೆ. ನ್ಯೂರೋವಿಯರ್ ಎಂಬ ಜಪಾನಿನ ಕಂಪನಿ ಇದನ್ನು ಆವಿಷ್ಕರಿಸಿದ್ದು, ಈಗ ಭಾರತದ ಮಾರುಕಟ್ಟೆಗೂ ಬಂದಿದೆ.
ಏನಿದರ ವಿಶೇಷ?
ನಮ್ಮ ಮೂಡ್ ಹೇಗಿದೆ ಎಂದು ಪತ್ತೆ ಹಚ್ಚಲು ಇದರಲ್ಲಿ ಡಿಟೆಕ್ಟಿವ್ ಸಾಫ್ಟ್ವೇರ್ ಇದೆ.
ಎರಡು ನಿಮಿಷದೊಳಗೆ ಪದೇಪದೇ ಮೂಡ್ ಬದಲಿಸುತ್ತಿದ್ದರೆ, ಹಾಡುಗಳೂ ಅದೇ ರೀತಿ ಬದಲಾಗುತ್ತಿರುತ್ತವೆ. ಬಹುಶಃ ಹುಡುಗಿಯರ ಚಂಚಲ ಚಿತ್ತಕ್ಕಿದು ಸರಿಹೊಂದುವುದಿಲ್ಲ!
ಎಲ್ಇಡಿ ಇಂಡಿಕೇಟರ್ನ ವಿಶೇಷ ಡಿಸ್ಪ್ಲೇ ಇದೆ.
ಹೀಗೆ ಮೇಲಿಂದ ಮೇಲೆ ಮೆದುಳನ್ನು ಸ್ಕ್ಯಾನ್ ಮಾಡಿದರೂ, ಇದರಿಂದ ಆರೋಗ್ಯಕ್ಕೇನೂ ಹಾನಿ ಇಲ್ಲವಂತೆ.
ಬ್ಯಾಟರಿ ಬೇಗ ಬರಿದಾಗುವುದೊಂದೇ ಇದರ ಕೊರತೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.