ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಯುಗಧರ್ಮದ ರಚನಾ ಮಾರ್ಗ

Rashmi Kasaragodu
Updated On : 30 Mar 2013, 2:26 am

ಭಾರತ ಇಂದು ಬೋಧಕರಿಂದ ಮತ್ತು ಸುಧಾರಕರಿಂದ ತುಂಬಿ ತುಳುಕಿದೆ. ಇಲ್ಲಿ ಕಾರ್ಯಶೀಲರಾಗಿ ದುಡಿಯುವವರಿಗಿಂತ ಸೋಮಾರಿಗಳಾಗಿ ದಾರಿ ತೋರುವವರೇ ಅಧಿಕ. ಭಾರತದ ಜ್ವಲಂತ ಸಮಸ್ಯೆಗಳಿಗೆ ಮೇಲ್ಪದರದಲ್ಲಿ ಔಷಧ ಹಚ್ಚುವವರೇ ಜಾಸ್ತಿ.ಪರದೇಶ, ಪರಧರ್ಮಗಳ ಮಾರ್ಗಗಳನ್ನು ತಂದು ಭಾರತದಲ್ಲಿ ಅಳವಡಿಸುವವರೇ ಹೆಚ್ಚು.
ನಮ್ಮ ದೇಶದ ಮಣ್ಣಿಗೆ, ಜನರ ಗುಣಸ್ವಭಾವಗಳಿಗೆ ಅದಕ್ಕಿಂತ ಮುಖ್ಯವಾಗಿ ಪರಂಪರೆಯ ಯುಗಧರ್ಮಕ್ಕೆ ಅದು ಹೊಂದಾಣಿಕೆಯಾಗುತ್ತದೆಯೇ, ಇಲ್ಲವೇ ಎಂಬುದನ್ನು ಆಲೋಚಿಸದೆ ತಮ್ಮ ಬೆಳವಣಿಗೆಗೆ ಭಾರತದ ಸ್ಥಿತಿಗತಿಯನ್ನೇ ಮೆಟ್ಟಿಲು ಮಾಡಿಕೊಂಡು ಯಥಾಸ್ಥಿತಿ ಕಾಪಾಡಿಕೊಂಡು ಹೋಗುವವರೇ ಹೆಚ್ಚಾಗಿದ್ದಾರೆ.
ನಾನು ಕೇವಲ ಒಬ್ಬ ಸುಧಾರಕನಲ್ಲ, ಸುಧಾರಣಾ ಚಳವಳಿಗಳು ಹೆಚ್ಚಿನದೇನನ್ನೂ ಸಾಧಿಸಲಾರವು. ಅವು ಪಾಶ್ಚಾತ್ಯ ರೀತಿ ನೀತಿಗಳ ಅಂಧಾನುಕರಣೆ ಮಾತ್ರವೇ ಆಗಿವೆ. ಸುಧಾರಕರು ಸ್ವಲ್ಪಸ್ವಲ್ಪವನ್ನೇ ಸುಧಾರಣೆ ಮಾಡಲು ನೋಡುತ್ತಾರೆ. ಆದರೆ ನಾನು ಆಮೂಲಾಗ್ರವಾಗಿ ಸುಧಾರಣೆಯಾಗಬೇಕೆನ್ನುತ್ತೇನೆ. ಅವರಿಗೂ ನನಗೂ ವ್ಯತ್ಯಾಸವಿರುವುದು ಕಾರ್ಯವಿಧಾನದಲ್ಲಿ. ನನ್ನದು ರಚನಾತ್ಮಕ ವಿಧಾನ.
ನಾನು ಸುಧಾರಣೆ ಎಂಬುದನ್ನು ಒಪ್ಪುವುದಿಲ್ಲ. ನಾನೊಪ್ಪುವುದು ಬೆಳವಣಿಗೆಯನ್ನು. ನಾವು ಪರಂಪರೆಯ ಯುಗಧರ್ಮದ ರಚನಾ ರಾಜಮಾರ್ಗದಲ್ಲಿ ನಡೆಯೋಣ.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement