ನನಗೆ ಉದ್ದ ಕೂದಲು ಇಷ್ಟ
ನನಗೆ ಕೂದಲು ತುಂಬಾ ಉದ್ದ ಬೆಳೆಯಬೇಕೆಂಬ ಆಸೆ. ನನ್ನ ಕೂದಲು ತುದಿಯಲ್ಲಿ ಕವಲೊಡೆಯುತ್ತಿದೆ, ಅಲ್ಲದೆ ಕೂದಲು ಉದುರುತ್ತಿದೆ. ಏನು ಮಾಡಬೇಕು?
- ನಿವೇದಿತಾ ಎಂ.ಸಿ.
ಕೂದಲು ಉದ್ದ ಬೆಳೆಯಬೇಕೆಂಬ ಆಸೆ ನಿಮಗೊಬ್ಬರಿಗೇ ಅಲ್ಲ, ಎಲ್ಲ ಹೆಣ್ಣು ಮಕ್ಕಳಿಗೂ ಇರುತ್ತದೆ. ಸರಿ ಯಾದ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ. ಹಣ್ಣು, ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಿನ್ನಿ. ದಿನಕ್ಕೆ ಕನಿಷ್ಠ 4 ಲೀ. ನೀರು ಕುಡಿಯಿರಿ. ಕೂದಲಿಗೆ ನಿಯಮಿತವಾಗಿ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ... ಆಗ ನೋಡಿ ನಿಮ್ಮ ಕೂದಲು ಎಷ್ಟು ಉದ್ದವಾಗಿ ಬೆಳೆಯುತ್ತದೆಂಬುದನ್ನು. ಇನ್ನು ಕೂದಲಿನ ತುದಿ ಕವಲೊಡೆಯುತ್ತಿದ್ದರೆ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ. ಅವರ ಸಲಹೆಯಂತೆ ನಡೆದುಕೊಳ್ಳಿ.
ಡಾ. ಸ್ಯಾಟಲೈಟ್
anekaby2@gmail.com