ಚೈತನ್ಯದ ವಿಕಾಸ
ಭಾರತದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮೊದಲಾದ ರಂಗಗಳಲ್ಲಿ ಇಂದು ಯಥೇಚ್ಛವಾಗಿ ಕಾಣುತ್ತಿರುವ ವಿಜೃಂಭಿತ ಮಾದರಿಯೆಂದರೆ ಅನುಕರಣೆ. ಅನುಯಾಯಿಗಳು, ಹಿಂಬಾಲಕರು ಎಂದು ಕರೆಸಿಕೊಳ್ಳುವ ಬಹುತೇಕರಲ್ಲಿ ವಿವೇಚನಾರಹಿತ ವರ್ತನೆಯಾದ ಅಂಧಾನುಕರಣೆಯನ್ನು ಕಾಣುತ್ತೇವೆ. ಇದು ವ್ಯವಸ್ಥೆಯನ್ನು ಪ್ರತಿಗಾಮಿತ್ವಕ್ಕೆ ಕಟ್ಟಿಹಾಕುವ ವಿಕೃತತಂತ್ರ.
ಆದರೆ ಸ್ವಾಮಿ ವಿವೇಕಾನಂದರು ಜನರನ್ನು ಆಲೋಚಿಸುವಂತೆ, ವಿವೇಚಿಸುವಂತೆ ಮಾಡಿ, ಚಿಂತನೆಯ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿ, ಆಗ ಅವರೇ ತಮ್ಮ ಕಾಲ ಮೇಲೆ ತಾವು ನಿಲ್ಲುತ್ತಾರೆ. ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುತ್ತಾರೆ. ಯಾರನ್ನು ಅನುಸರಿಸಬೇಕು ಎಂಬುದನ್ನು ಅವರೇ ತೀರ್ಮಾನಿಸಿಕೊಳ್ಳುತ್ತಾರೆ. ಇಂತಹ ವ್ಯಕ್ತಿಗಳ ನಿರ್ಮಾಣವೇ ಪ್ರತಿಯೊಬ್ಬ ನಾಯಕನೂ, ಸುಧಾರಕನೂ ಮಾನವ ಕುಲಕೋಟಿಗೆ, ಮಾತೃಭೂಮಿಗೆ ಸಲ್ಲಿಸುವ ಕೊಡುಗೆ.
ಯಾವುದು ಪ್ರಕೃತಿಗೆ ವಿರೋಧವಾಗಿ ನಿಂತು ಪ್ರತಿಭಟಿಸುತ್ತದೆಯೋ ಅದೇ ಚೇತನ; ಅದರಲ್ಲಿಯೇ ಚೈತನ್ಯದ ವಿಕಾಸವಿರುತ್ತದೆ. ಒಂದು ಸಾಮಾನ್ಯವಾದ ಇರುವೆಯನ್ನು ಕೊಲ್ಲುವುದಕ್ಕೆ ಹೋಗಿ, ಅದೂ ತನ್ನ ಜೀವವನ್ನು ಉಳಿಸಿಕೊಳ್ಳುವುದಕ್ಕೆ ಒಮ್ಮೆ ಎದುರುಬೀಳುತ್ತದೆ. ಎಲ್ಲಿ ಕ್ರಿಯೆ ಅಥವಾ ಪ್ರಯತ್ನ ಇದೆಯೋ, ಎಲ್ಲಿ ಪ್ರತಿಭಟನೆ ಇದೆಯೋ ಅಲ್ಲಿಯೇ ಜೀವದ ಚಿಹ್ನೆ, ಅಲ್ಲಿಯೇ ಚೈತನ್ಯದ ವಿಕಾಸ.
-ಆನಂದ ಎಸ್.ಎನ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.