ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಠಾಣೆ ಮತ್ತು ಅಧಿಕಾರಿಗಳು

Vishwanath S
Updated On : 6 May 2013, 12:20 pm

ಪ್ರತಿಯೊಂದು ಪೊಲೀಸ್ ಠಾಣೆಗೆ ಇಂತಿಷ್ಟೇ ವ್ಯಾಪ್ತಿ ಎಂದು ಇರುತ್ತದೆ. ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯ ಪರಿಶೀಲನೆ, ಅಪರಾಧಿಗಳ ನಿಯಂತ್ರಣ ಸೇರಿದಂತೆಅಪರಾಧಕ್ಕೆ ಸಂಬಂಧಪಡುವ ಪ್ರಕರಣಗಳ ಬಗ್ಗೆ ಕ್ರಮಕೈಗೊಳ್ಳುತ್ತಾರೆ.
ಪೊಲೀಸ್ ಠಾಣೆಯ ವಿಸ್ತೀರ್ಣ ಗ್ರಾಮ, ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವ್ಯತ್ಯಾಸವಿರುತ್ತದೆ. ಪ್ರತಿ ಠಾಣೆಯಲ್ಲೂ ಪೊಲೀಸ್ ಪೇದೆ, ಮುಖ್ಯ ಪೊಲೀಸ್ ಪೇದೆ, ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್ ಇರುತ್ತಾರೆ.
ಆದರೆ ಗ್ರಾಮಾಂತರ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಇರುವುದಿಲ್ಲ. ಸಬ್ ಇನ್ಸ್‌ಪೆಕ್ಟರ್ ಠಾಣೆಯ ಉಸ್ತುವಾರಿ ಅಧಿಕಾರಿ.
ನಂತರ ಅವರ ಮೇಲಧಿಕಾರಿ ಎಸಿಪಿ(ಸಹಾಯಕ ಪೊಲೀಸ್ ಆಯುಕ್ತ), ಡಿಸಿಪಿ(ಉಪ ಪೊಲೀಸ್ ಆಯುಕ್ತ),ಜಂಟಿ ಪೊಲೀಸ್ ಆಯುಕ್ತ), ಹೆಚ್ಚುವರಿ ಪೊಲೀಸ್ ಆಯುಕ್ತ ಹಾಗೂ ಅವರ ಮೇಲ್ಪಟ್ಟು ಸಿಪಿ(ಪೊಲೀಸ್ ಆಯುಕ್ತ) ಇರುತ್ತಾರೆ. ಆಯುಕ್ತರು ನಗರ ಹಾಗೂ ಮಹಾನಗರದ ಉಸ್ತುವಾರಿ.
ನಗರಕ್ಕೆ ಪೊಲೀಸ್ ಆಯುಕ್ತರು ಹಿರಿಯ ಪೊಲೀಸ್. ಅದೇ ರೀತಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಎಸ್ಪಿ(ಪೊಲೀಸ್ ವರಿಷ್ಟಾಧಿಕಾರಿ) ಹಿರಿಯ ಅಧಿಕಾರಿ. ಇವರು ಜಿಲ್ಲೆಯ ಉಸ್ತುವಾರಿ ವಹಿಸಿರುತ್ತಾರೆ.
ಇವರಿಂಗಿಂತ ಹಿರಿಯ ಅಧಿಕಾರಿಗಳೆಂದರೆ ಡಿಜಿ ಮತ್ತು ಐಜಿಪಿ(ಪೊಲೀಸ್ ಮಹಾನಿರ್ದೇಶಕ), ಎಡಿಜಿಪಿ(ಸಹಾಯಕ ಪೊಲೀಸ್ ಮಹಾನಿರ್ದೇಶಕ,ಇಬ್ಬರು ಎಡಿಜಿಪಿ ಇದ್ದು ಒಬ್ಬರು ಕಾನೂನು ಸುವ್ಯವಸ್ಥೆ ಮತ್ತೊಬ್ಬರು ಅಪರಾಧ ವಿಭಾಗದ ಮುಖ್ಯಸ್ಥರು), ಎಡಿಜಿಪಿ (ಕೆಎಸ್‌ಆರ್‌ಪಿ), ಐಜಿಪಿ, ಡಿಐಜಿ ಹುದ್ದೆಯ ಅಧಿಕಾರಿಗಳು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಾರೆ.
ಎಸ್ಪಿ ಹಾಗೂ ಡಿಸಿಪಿಗಳ ಅಧಿಕಾರ ವ್ಯಾಪ್ತಿ ಒಂದೇ ಇರುತ್ತದೆ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement