ನನಗೆ ತುಂಬಾ ಮರೆವು!
ನನಗೆ ತುಂಬಾ ಮರೆವು. ಎಲ್ಲೋ ಇಟ್ಟು ಇನ್ನೆಲ್ಲೋ ಹುಡುಕುತ್ತಿರುತ್ತೇನೆ. ಅಡುಗೆಯಲ್ಲಂತೂ ಉಪ್ಪು, ಹುಳಿ ಹಾಕಿದ್ದೀನೋ ಇಲ್ಲವೋ ಎಂಬುದರ ಬಗ್ಗೆ ಪ್ರತಿದಿನ ಗೊಂದಲ. ನನ್ನದು ಮಾತು ಸ್ವಲ್ಪ ಜಾಸ್ತಿ. ಹಾಗಾಗಿ ಮನೆಯ ಎಲ್ಲರಿಂದ ಗೇಲಿಗೊಳಗಾಗುತ್ತೇನೆ. ಏನು ಮಾಡಲಿ?
- ಸರಸ್ವತಿ ಗಾಣಿಗ, ಹೊಸಂಗಡಿ
ಕೆಲಸ ಮಾಡುವಾಗ ಮಾತನಾಡುವು ದರಿಂದ ಕೆಲಸದ ಮೇಲೆ ಲಕ್ಷ್ಯವಿರುವುದಿಲ್ಲ. ಕೆಲಸ ಮಾಡುವಾಗ ಮಾತನಾಡುವುದನ್ನು ನಿಲ್ಲಿಸಿ. ಅದಕ್ಕೊಂದು ಪ್ರಯತ್ನ ಮಾಡಿ. 'ಇವತ್ತು ಕೆಲಸ ಮಾಡುವಾಗ ಮಾತನಾಡುವುದಿಲ್ಲ' ಎಂದು ಬೆಳಗ್ಗೆ ಎದ್ದ ತಕ್ಷಣ ಸಂಕಲ್ಪ ಮಾಡಿ. ಇದರಿಂದ ಗೊಂದಲಗಳು, ಮನೆಯವರಿಂದ ಗೇಲಿಗೊಳಗಾಗುವ ಸಂದರ್ಭ ತಪ್ಪುತ್ತದೆ. ಹಾಗೆ ಮಾಡಿದಾಗಲೂ ಮರೆವು ಅನ್ನಿಸಿದರೆ ವೈದ್ಯರನ್ನು ಸಂಪರ್ಕಿಸಿ.
-ಡಾ. ಸ್ಯಾಟಲೈಟ್
anekaby2@gmail.com