ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮುಖವರ್ಣಿಕೆ

Vishwanath S
Updated On : 7 May 2013, 12:58 pm

ಕಲೆಯಲ್ಲಿ ಹೊಸತನಕ್ಕೆ ನಿಜವಾದ ಕಲಾವಿದ ಯಾವಾಗಲೂ ಚಡಪಡಿಸುತ್ತಿರುತ್ತಾನೆ. ಅದರ ಮೂಲಕ ತನ್ನದೇ ಶೈಲಿಯನ್ನು ಸ್ಥಾಪಿಸಲೂ ಹೆಣಗುತ್ತಿರುತ್ತಾನೆ. ಹೀಗೆ ಬುಡಕಟ್ಟು ಸಂಸ್ಕೃತಿಯಲ್ಲಿ ತನ್ನ ಶೈಲಿಯನ್ನು ಕಂಡುಕೊಂಡ ಕಲಾವಿದ ಧಾರವಾಡದ ಎನ್.ಆರ್. ನಾಯ್ಕರ್.
ನಾಯ್ಕರ್ ಪ್ರಸ್ತುತ ಧಾರವಾಡದ ಭಾರತೀಯ ಕಲಾ ಕೇಂದ್ರದಲ್ಲಿ ಉಪನ್ಯಾಸಕ. ಮೂಲತಃ ಬಾಗಲಕೋಟೆಯ ಬದಾಮಿ ತಾಲೂಕಿನ ಹಲಕುರ್ಕಿ ಗ್ರಾಮದವರು. ಕೃಷಿ ಕುಟುಂಬ, ಕಲೆಯ ಹಿನ್ನೆಲೆಯಿರಲಿಲ್ಲ. ಚಿಕ್ಕಪ್ಪನ ಪ್ರೋತ್ಸಾಹದಿಂದ ಧಾರವಾಡದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಉನ್ನತ ಚಿತ್ರಕಲಾ ಶಿಕ್ಷಣ ಪೂರೈಸಿಕೊಂಡರು.
ಕಲಾಕೇಂದ್ರದಲ್ಲಿ ಉದ್ಯೋಗ ಮಾಡುತ್ತಲೇ ತಮ್ಮ ಕಲಾಕೃತಿಗಳಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಾ ರಾಜ್ಯ- ಹೊರರಾಜ್ಯಗಳಲ್ಲಿ ಜರುಗಿದ ಕಲಾಶಿಬಿರ, ಪ್ರದರ್ಶನ, ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಜಲವರ್ಣ, ತೈಲವರ್ಣ, ಆಕ್ರಾಲಿಕ್ ವರ್ಣ ಮಾಧ್ಯಮದಲ್ಲಿ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಿರುವ ನಾಯ್ಕರ್, ದೇವಾನುದೇವತೆಗಳು, ರಾಮಾಯಣ- ಮಹಾಭಾರತ, ಪೌರಾಣಿಕ ಕಥೆಗಳ ಸರಣಿ ಕೃತಿಗಳನ್ನು ರಚಿಸಿದವರು.
ಮುಖ್ಯವಾಗಿ ಈಗ ಬುಡಕಟ್ಟು ಜನಾಂಗದವರ ಬದುಕು- ಜೀವನ ಶೈಲಿ, ಸಂಪ್ರದಾಯ, ಉಡುಗೆ- ತೊಡುಗೆ ಇತ್ಯಾದಿಗಳನ್ನು ತಮ್ಮದೇ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಇಲ್ಲಿರುವ ಚಿತ್ರಗಳು ಪುರುಷ- ಮಹಿಳೆಯರ ಮುಖಾಲಂಕಾರವನ್ನೆ ಮುಖ್ಯವಾಗಿಟ್ಟುಕೊಂಡು ರಚಿಸಿದ್ದು.
ಒಟ್ಟಾರೆ ಈ ಕಲಾಕೃತಿಗಳು ಕೇವಲ ಬಣ್ಣ-ರೇಖೆಗಳ ಸಂಯೋಜನೆ ಮಾತ್ರವಾಗಿರದೆ ನಾಡಿನ ಜಾನಪದ ಸಂಸ್ಕೃತಿ ಇತಿಹಾಸವನ್ನು ದಾಖಲಿಸುವಂಥವು. ಕಲಾಕೃತಿಗಳ ಪ್ರದರ್ಶನ ಗೋವಾದಲ್ಲಿ ಮೇ 7ರಿಂದ ಒಂದು ವಾರ ನಡೆಯಲಿದೆ.

- ವಿಜಯಾನಂದ ಬಿ. ಕಾಲವಾಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments