ಸಣ್ಣ ಕತೆ
ಉತ್ತಮ ನಿರ್ವಹಣೆಗಾಗಿ ಸಿಬ್ಬಂದಿಯನ್ನು ಪ್ರೇರೇಪಿಸುವ ಬಗೆಗಿನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಆಗತಾನೇ ತಮ್ಮ ಕಾರ್ಯಾಲಯಕ್ಕೆ ಹಿಂತಿರುಗಿದ್ದ ಪ್ರಬಂಧಕರೊಬ್ಬರು ತಾವು ಅಲ್ಲಿ ತಿಳಿದುಕೊಂಡು ಬಂದಿದ್ದ ವಿಷಯವನ್ನು ಕಾರ್ಯಗತಗೊಳಿಸಲು ಅತ್ಯಂತ ಉತ್ಸುಕರಾಗಿದ್ದರು.
ಸಿಬ್ಬಂದಿಯೋರ್ವನನ್ನು ತಮ್ಮ ಕೋಣೆಗೆ ಕರೆಸಿ, 'ಇನ್ನು ಮುಂದೆ ನಿಮ್ಮ ಕೆಲಸದ ಯೋಜನೆಯನ್ನು ಸಿದ್ಧಪಡಿಸುವ ಹಾಗೂ ನಿಯಂತ್ರಿಸುವ ಎಲ್ಲ ಕಾರ್ಯವನ್ನು ನಿಮ್ಮ ಸುಪರ್ದಿಗೇ ಬಿಡಲಾಗುವುದು. ಇದರಿಂದ ಉತ್ಪಾದಕತೆಯು ಗಣನೀಯವಾಗಿ ಹೆಚ್ಚುವುದೆಂಬ ಭರವಸೆ ನನಗಿದೆ' ಎಂದು ಹೇಳಿದರು.
ಸಿಬ್ಬಂದಿ ಕೇಳಿದ- 'ನನಗೆ ಹೆಚ್ಚಿನ ಸಂಬಳ ಕೊಡಲಾಗುವುದೇ?
'ಛೆ! ಛೆ! ಹಣ ಪ್ರೇರಣಾಶಕ್ತಿಯಲ್ಲ ಮತ್ತು ಸಂಬಳ ಹೆಚ್ಚಾಗುವುದರಿಂದ ನಿಮಗೆ ಸಂತೃಪ್ತಿ ಸಿಗಲಾರದು.'
'ಒಳ್ಳೆಯದು. ಉತ್ಪಾದನೆ ಹೆಚ್ಚಾದರೆ ನನ್ನ ಸಂಬಳವನ್ನು ಹೆಚ್ಚಿಸಲಾಗುವುದೇ?'
'ನೋಡಿ', ಪ್ರಬಂಧಕರು ಹೇಳಿದರು, 'ನಿಮಗೆ ಪ್ರೇರಣಾ ತತ್ತ್ವ ಸರಿಯಾಗಿ ಅರ್ಥವಾದ ಹಾಗೆ ಕಾಣುವುದಿಲ್ಲ. ಈ ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿ. ಯಾವುದು ನಮಗೆ ನಿಜವಾಗಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಪ್ರೇರಣೆಯನ್ನು ಒದಗಿಸುತ್ತದೆ ಎನ್ನುವುದನ್ನು ಇದರಲ್ಲಿ ಚೆನ್ನಾಗಿ ವಿವರಿಸಿದ್ದಾರೆ.'
ಆ ಸಿಬ್ಬಂದಿ ಹೊರಡಲು ಅನುವಾಗುತ್ತಿದ್ದಂತೆಯೇ ಕ್ಷಣ ತಡೆದು ಕೇಳಿದ- 'ನಾನು ಈ ಪುಸ್ತಕವನ್ನು ಓದಿದರೆ ನನ್ನ ಸಂಬಳವನ್ನು ಹೆಚ್ಚಿಸಲಾಗುವುದೇ?'
- ನಂದಿನಿ ಡಿ. ಕಾಮತ್
- ಮೂಲ: ಅಂತೋನಿ ಡಿಮೆಲ್ಲೊ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.