ಟೆನ್ಶನ್ನಿಂದ ತಲೆಸುತ್ತುತ್ತೆ
ಭವಿಷ್ಯದ ದೃಷ್ಟಿಯಿಂದ, ಅಪ್ಪನ ಸಿಟ್ಗೆ ಹೆದರಿ ಓದುವ ಹಂಬಲವುಂಟಾಗುತ್ತದೆ. ಆದರೆ ಟೆನ್ಶನ್ನಿಂದ ತಲೆ ಸುತ್ತುತ್ತೆ, ಕಣ್ಣು ಮಂಜಾಗುತ್ತೆ, ಹೆದರಿಕೆ ಭಯ ಉಂಟಾಗುತ್ತೆ. ಏನು ಮಾಡಲಿ?
- ವರಲಕ್ಷ್ಮಿ, ಪುಟ್ಟಸೋಮನಹಳ್ಳಿ
ನಿಮ್ಮ ಭವಿಷ್ಯದ ದೃಷ್ಟಿಯಿಂದ ಓದಿ. ನಿಮಗೆ ಓದಿನಲ್ಲಿ ಆಸಕ್ತಿಯಿಲ್ಲದಿರು ವುದರಿಂದ ಈ ಟೆನ್ಶನ್, ತಲೆಸುತ್ತು, ಕಣ್ಣು ಮಂಜಾಗುವುದು, ಹೆದರಿಕೆ ಭಯ ಎಲ್ಲ ಕಾಣಿಸಿಕೊಳ್ಳುತ್ತಿದೆ. ಒಂದು ಬಾರಿ ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡಿರೆಂದರೆ ಈ ಎಲ್ಲ ತೊಂದರೆಗಳು ಹೇಳಹೆಸರಿಲ್ಲದಂತೆ ಮಂಗಮಾಯವಾಗುತ್ತವೆ. ನೀವು ಓದದಿರುವುದಕ್ಕೆ ನಿಮ್ಮ ಅಪ್ಪನಿಗೆ ನಿಮ್ಮ ಮೇಲೆ ಸಿಟ್ಟೇ ಹೊರತು, ಪ್ರೀತಿ ಇದ್ದೇ ಇದೆ. ಛಲದಿಂದ ಓದಿ. ಆಗ ನೋಡಿ ನಿಮ್ಮ ಭವಿಷ್ಯ ಹೇಗೆ ಬದಲಾಗುತ್ತದೆ ಎಂದು.
-ಡಾ. ಸ್ಯಾಟಲೈಟ್
anekaby2@gmail.com