ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಂಪಗೋಡರ ಗಾಯನ ಗೋಷ್ಠಿ

Vishwanath S
Updated On : 10 May 2013, 1:15 am

ಸಂಗೀತ ಕಲಾಭಿಮಾನಿಗಳಿಗೆ ವಿದ್ವಾನ್ ಸಂಪಗೋಡು ಎಸ್. ವಿಘ್ನರಾಜ ಹೆಸರು ಚಿರಪರಿಚಿತ. ಕಂಠಸಿರಿಯಲ್ಲಿ ಜನಮನ ಗೆದ್ದ ಸಂಗೀತಗಾರ. ಅಭಿಮಾನಿಗಳಿಗಾಗಿ ಹಾಡುತ್ತಾ ಬಂದಿರುವ ವಿಘ್ನರಾಜ ಅವರು ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕ ಸಂಗೀತದಲ್ಲಿ ಪರಿಣತಿ ಪಡೆದಿರುವ ಇವರು ಸಂಗೀತಲೋಕದಲ್ಲಿ ಇವರದೇ ಆದ ಛಾಪು ಮೂಡಿಸಿದ್ದಾರೆ. ಖುಷಿಯ ಸಂಗತಿ ಎಂದರೆ ನಾಳೆ (12.05.2013), ಭಾನುವಾರ ಇವರ ಗಾಯನ ಕಾರ್ಯಕ್ರಮ ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯಲಿದೆ. ವಯಲಿನ್ ಮೂಲಕ ವಿಘ್ನರಾಜ ಅವರಿಗೆ ಸಾಥ್ ನೀಡುತ್ತಿರುವವರು ವಿದ್ವಾನ್ ಚಾರುಲತಾ ರಾಮಾನುಜಮ್. ಮೃದಂಗದಲ್ಲಿ ಜತೆಯಾಗುವವರು ವಿದ್ವಾನ್ ಬಿ.ಸಿ. ಮಂಜುನಾಥ್. ಕಲಾರಸಿಕರಿಗೆ ಈ ಮೂವರ ಸಂಗೀತ ಲಹರಿ ಆಹ್ವಾನಿಸುತ್ತಿದೆ. ಧಾವಂತದ ಬದುಕಿನಲ್ಲಿ ಜನತೆಗೂ ಗಾನಲೋಕದಲ್ಲಿ ಇಳಿದು ಮನಸ್ಸನ್ನು ಹಗುರಮಾಡಿಕೊಳ್ಳುವ ಅವಕಾಶ.
ದಿನಾಂಕ: ಮೇ 12, 2013. ಸಮಯ: ಸಂಜೆ 5 ಗಂಟೆ.
ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement