ಅವಳ ಕಣ್ಣಿಗೆ ಚಿನ್ನದ ಲೆನ್ಸ್ಗಳು!
ನಾರಿಯ ಕಣ್ಣಿನ ಹೊಳಪಿಗೂ ಚಿನ್ನದ ಫೋಕಸ್ಸಿದೆ. ಆದರೂ, ಮಹಾರಾಷ್ಟ್ರದ ಚಂದ್ರಶೇಖರ್ ಚವ್ಹಾಣ್ ಎಂಬಾತ ತನ್ನ ಹೆಂಡ್ತಿಗೆ ಚಿನ್ನದ ಲೆನ್ಸ್ ಅನ್ನು ಇರಿಸಿ, ಬಂಗಾರದ ದೃಷ್ಟಿಯನ್ನೇ ದಯಪಾಲಿಸಿದ್ದಾನೆ. ಈ ಚವ್ಹಾಣ್ ಎಂಬಾತ ನೇತ್ರತಜ್ಞನೂ ಹೌದು. ಹಿಂದೊಮ್ಮೆ ತನ್ನ ಸ್ಫುರದ್ರೂಪಿ ಹೆಂಡತಿಗೆ ಹಲ್ಲಿನಾಭರಣಗಳನ್ನು ಮಾಡಿಸಿ ಸುದ್ದಿಯಾಗಿದ್ದ. ಈಗಿದು ದೃಷ್ಟಿಯಾಭರಣ. ಈ ಲೆನ್ಸ್ ಏನು ಕಣ್ಣೊಳಗಿನ ಕಾರ್ನಿಯಾಕ್ಕೆ ಟಚ್ ಆಗುವುದಿಲ್ಲ. ಪತ್ನಿಗೇನು ದೃಷ್ಟಿ ಸರಿಯಿಲ್ಲ ಅಂತ ಈತ ಲೆನ್ಸ್ ಅಳವಡಿಸಿಲ್ಲ. ಅವನ ಪಾಲಿಗೆ ಇದೊಂದು ಕ್ರೇಜ್. 'ಬಂಗಾರವನ್ನು ಎಲ್ಲಿ ಬೇಕಾದರೂ ಅಳವಡಿಸಿಕೊಳ್ಳಬಹುದು' ಎನ್ನುವ ತಾನು ಮಾತ್ರ ಬಂಗಾರದಿಂದ ದೂರವಿದ್ದಾನೆ. ಗಳಿಸಿದ ಹಣವನ್ನೆಲ್ಲ ಪತ್ನಿಗೆ ಬಂಗಾರ ಮಾಡಿಸಿ, ಆಕೆಯನ್ನು ಚಿನ್ನದ ಜಿಂಕೆ ಥರ ನೋಡ್ಕೊಳ್ತಿದ್ದಾನೆ.