ಚಿನ್ನದ ಎಟಿಎಂ ಗೊತ್ತುಂಟಾ?
ಆ ಎಟಿಎಮ್ಮಲ್ಲಿ ಕಾರ್ಡು ಉಜ್ಜಿದರೆ ದುಡ್ಡು ಹೊರಗಿಣಿಕುವುದಿಲ್ಲ. ಚಿನ್ನದ ಕಾಯಿನ್ನೋ, ಸೀಮೆಸುಣ್ಣದಷ್ಟು ಬಂಗಾರದ ಪೀಸೋ ಹೊರಬರುತ್ತದೆ. ಇಂಥ ಎಟಿಎಂಗಳು ವಿಶ್ವದಲ್ಲಿ ಇರೋದು ಎರಡೇ ಎರಡು ಕಡೆ. ಒಂದು ಜರ್ಮನಿಯಲ್ಲಿ, ಮತ್ತೊಂದು ಅಬುಧಾಬಿಯಲ್ಲಿ. ಜರ್ಮನಿಯ ವಾಣಿಜ್ಯೋದ್ಯಮಿ ಥಾಮಸ್ ಗೀಸ್ಲರ್ ಎಂಬಾತ ಇದನ್ನು ಜಗತ್ತಿಗೆ ಪರಿಚಯಿಸಿದ. ಈ ಚಿನ್ನ ಕೊಡುವ ಎಟಿಎಂ ಕೂಡ ಚಿನ್ನದಿಂದಲೇ ನಿರ್ಮಾಣವಾಗಿದೆ. ಮೂರು ವರ್ಷದ ಹಿಂದೆ ಈ ಎಟಿಎಂ ಕಂಡುಹಿಡಿಯಲಾಯಿತು.