ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜೋರು ಜಾತ್ರೆ

Vishwanath S
Updated On : 14 May 2013, 12:41 pm

ಸಾಮಾನ್ಯವಾಗಿ ಸರ್ಕಾರಿ ದೇವಸ್ಥಾನ ಎಂದರೆ ಅಭಿವೃದ್ಧಿಯಲ್ಲಿ ಕರ ಸೇರಿಸುವವರು ವಿರಳ. ಅಂಥದ್ದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ಕೇವಲ 323 ದಿನಗಳಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಸಡಗರದಲ್ಲಿದೆ. ಇದು ಪುತ್ತೂರು ಕ್ಷೇತ್ರದ ಬಗ್ಗೆ ಹತ್ತೂರಿನ ಜನತೆಗಿರುವ ಭಕ್ತಾಭಿಮಾನದ ದ್ಯೋತಕ.

ಸಡಗರವೋ ಸಡಗರ
ಮೇ 5ರಿಂದ 16ರ ವರೆಗೆ ಬ್ರಹ್ಮಕಲಶಾಭಿಷೇಕ, 13ರಂದು ದೇವರ ಪ್ರತಿಷ್ಠೆ, 16ರಂದು ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಮೇ 16ರಂದು ಧ್ವಜಾರೋಹಣಗೊಂಡು 25ರ ವರೆಗೆ ವಾರ್ಷಿಕ ಜಾತ್ರೆ ನಡೆಯಲಿದೆ. 22ರಂದು ಕೆರೆ ಉತ್ಸವ, 23ರಂದು ಬ್ರಹ್ಮರಥೋತ್ಸವ, ಪ್ರಸಿದ್ಧ ಪುತ್ತೂರು ಬೆಡಿ ಪ್ರದರ್ಶನ ಜರುಗಲಿದೆ. ಬ್ರಹ್ಮಕಲಶೋತ್ಸವಕ್ಕೆ ಪೇಜಾವರಶ್ರೀ, ರಾಘವೇಶ್ವರಶ್ರೀಗಳ ಉಪಸ್ಥಿತಿ ಜಾತ್ರೆಯನ್ನು ರಂಗೇರಿಸಲಿದೆ.

ವರ್ಷದೊಳಗೆ ನಿರ್ಮಾಣ
ಈ ದೇಗುಲ 11-12ನೇ ಶತಮಾನದಷ್ಟು ಹಳೆಯದು. ಪ್ರಾರಂಭದ ಬಳಿಕ ಈವರೆಗೆ ಬ್ರಹ್ಮಕಲಶ ನಡೆದ ದಾಖಲೆಯೇ ಇಲ್ಲ. ಅಜೀರ್ಣ ಸ್ಥಿತಿಯಲ್ಲಿದ್ದ ದೇಗುಲವನ್ನು ಕಳೆದವರ್ಷ ಕೆಡವಿ ಶಿಲೆಯಿಂದ ಪುನರ್ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರದಿಂದ ಈವರೆಗೆ ರು. 1.75 ಕೋಟಿ ಬಂದಿದೆ. ಭಕ್ತಾದಿಗಳಿಂದ ದೇಣಿಗೆ ಬರುತ್ತಲೇ ಇದೆ. ವಿಶ್ವಕರ್ಮ ಸಮಾಜ ಬಾಂಧವರು, ಕುಶಲಕರ್ಮಿಗಳು ಸೇರಿ ದೇವಸ್ಥಾನಕ್ಕೆ ಚಿನ್ನದ ಕಲಶ ಸಮರ್ಪಿಸಿದ್ದಾರೆ. ಕಳೆದವರ್ಷ ಉದ್ಯಮಿ ಮುತ್ತಪ್ಪ ರೈ ರು. 1 ಕೋಟಿ ವೆಚ್ಚದಲ್ಲಿ ದಕ್ಷಿಣ ಭಾರತದಲ್ಲೇ ಎತ್ತರದ ಬ್ರಹ್ಮರಥ ಸಮರ್ಪಿಸಿದ್ದರು ಎನ್ನುತ್ತಾರೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತಮೂಡಿತ್ತಾಯ.
ಮಂಗಳೂರಿನಿಂದ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ 52 ಕಿ.ಮೀ. ದೂರದಲ್ಲಿದೆ ಈ ದೇಗುಲ.  ವಿವರಕ್ಕೆ ವೆಬ್‌ಸೈಟ್: www.putturmahalingeshwara.com  ದೂರವಾಣಿ-08251-238211, 230511.

-ಆತ್ಮಭೂಷಣ್‌ 
-ಚಿತ್ರ: ಕೃಷ್ಣಾ ಸ್ಟುಡಿಯೋ ಪುತ್ತೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments