ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಧರ್ಮ ಮತ್ತು ಮಾನವ

Vishwanath S
Updated On : 13 May 2013, 1:26 am

ಇಂದು ಮಾನವನ ಜೀವನದಲ್ಲಿ ಧರ್ಮ ಹಾಸುಹೊಕ್ಕಾಗಿದೆ. ಆದರೆ ಅದು ತನ್ನ ಅರ್ಥವ್ಯಾಪ್ತಿಯನ್ನು, ಆಚರಣೆಯ ವಿಧಾನಗಳನ್ನು ವಿಸ್ತರಿಸಿಕೊಂಡಿದೆ. ಧರ್ಮವು ಜನಾಂಗದ ರಕ್ಷಾಕವಚವೂ, ಜನಬಾಹುಳ್ಯದ ಪ್ರದರ್ಶಕವೂ, ಪ್ರತಿಷ್ಠೆಯ ಪ್ರತೀಕವೂ ಆದರೆ, ದೇವರು ಆಚರಣೆಗಳ ಕೇಂದ್ರಶಕ್ತಿಯೂ, ಉದ್ಯ ಮದ ಲಾಭದಾಯಕ ಮೂರ್ತಿಯೂ, ಪಾಪ ಸ್ವೀಕರಿಸಿ ಪುಣ್ಯ ಒದಗಿಸುವ ಪರಿವರ್ತಕವೂ, ಉಳ್ಳವರಿಗೆ ದುಷ್ಟಾಚಾರಗಳ ಪರವಾನಗಿ ನೀಡುವ ದೊರೆಯೂ ಆಗಿರುವುದು.
ಮೃಗಸದೃಶನಾದವನನ್ನು ಮಾನವನನ್ನಾಗಿ ಮಾಡುವ, ಮಾನವನನ್ನು ದೇವನನ್ನಾಗಿ ಮಾಡುವ ಭಾವನೆಯೇ ಧರ್ಮ. ಮನುಷ್ಯನಿಗೆ ಶಾಂತಿ, ನೆಮ್ಮದಿಯನ್ನು ತರುವುದೇ ಧರ್ಮದ ಮೂಲ ಉದ್ದೇಶ. ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ, ಆಚರಣೆಯಲ್ಲಿ.
ಧರ್ಮವು ಮನುಷ್ಯನ ಅಂತರಂಗದಲ್ಲಿ ಸ್ವಾಭಾವಿಕವಾಗಿ ಹುದುಗಿರುವ ಶಕ್ತಿಯನ್ನು ವ್ಯಕ್ತಗೊಳಿಸುವುದು. ನೀವು ಧಾರ್ಮಿಕರಾಗುತ್ತಿರುವಿರಿ ಎನ್ನುವುದಕ್ಕೆ ಮೊದಲನೆ ಗುರುತೇ ನೀವು ಹೆಚ್ಚು ಉಲ್ಲಾಸಭರಿತವಾಗಿರುವುದು. ಜೋಲುಮುಖ ಹಾಕಿಕೊಂಡಿರುವುದು ಧಾರ್ಮಿಕತೆಯ ಕುರುಹಲ್ಲ.
ಧರ್ಮವನ್ನು ಇತರ ಶಾಸ್ತ್ರಗಳನ್ನು ಕಲಿಯುವಂತೆ ಭೌತಿಕ ವಿಷಯವಾಗಿ ಕಲಿಯದೆ ಮನಸ್ಸಿನಿಂದ ಮತ್ತು ಹೃದಯದಿಂದ ಕಲಿಯಬೇಕು. ಅದು ಆಂತರ್ಯದ ಮಲಿನತೆಯನ್ನು ತೊಳೆದು ಬಾಹ್ಯದಲ್ಲಿಯೂ ಪರಿಶುದ್ಧತೆಯನ್ನು ಬೆಳಗುವುದು. ಏಕೆಂದರೆ ಯಾವುದು ಆಂತರಂಗದಲ್ಲಿದೆಯೋ ಅದೇ ಬಹಿರಂಗದಲ್ಲಿ ಗೋಚರಿಸುವುದು.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement