ಪ್ರೀತಿ ಗೊತ್ತಾಗೋದು ಹೇಗೆ?
ಅಕ್ಕನ ಮಗಳನ್ನು ಪ್ರೀತಿಸುತ್ತಿದ್ದೇನೆ. ಅವಳ ಬಳಿ ಹೇಳಿಕೊಂಡಿಲ್ಲ. ಅವಳಿಗೆ ನನ್ನ ಕಂಡರೆ ಇಷ್ಟವಾ ಎಂದು ಕಂಡುಕೊಳ್ಳುವುದು ಹೇಗೆ? ಈಗ ಆಕೆಯ ಮದುವೆ ನಿಶ್ಚಯವಾಗಿದೆ. ಅವಳನ್ನು ಮರೆತು ಇರುವುದು ನನ್ನಿಂದ ಸಾಧ್ಯವಿಲ್ಲ. ಒಮ್ಮೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳೋಣ ಅನ್ನಿಸುತ್ತದೆ.
- ದೀಪಕ ಪಿ., ಶಹಾಪುರ
ಅಕ್ಕನ ಮಗಳಿಗೆ ನಿಮ್ಮ ಮೇಲೆ ಇಷ್ಟ ಇದ್ದಿದ್ದರೆ ಅವಳು ಬೇರೊಬ್ಬನೊಂದಿಗೆ ಒಪ್ಪಿಕೊಳ್ಳುತ್ತಿರಲಿಲ್ಲ. ಒಂದೊಮ್ಮೆ ಮನೆಯವರ ಒತ್ತಡಕ್ಕೆ ಮಣಿದು ಒಪ್ಪಿಕೊಂಡಿದ್ದರೂ ನಿಮ್ಮ ಬಳಿ ಹೇಳಿಕೊಳ್ಳುತ್ತಿದ್ದಳು ಅಲ್ಲವಾ? ಹೀಗಾಗಿಲ್ಲ ಎಂದರೆ ಆಕೆಗೆ ನಿಮ್ಮ ಬಗ್ಗೆ 'ಆ ಥರದ' ಯಾವುದೇ ಭಾವನೆ ಇಲ್ಲವೆಂದೇ ಅರ್ಥ ತಾನೆ? ಆಕೆಯ ಮುಂದಿನ ಬದುಕಿಗೆ ಶುಭ ಹಾರೈಸಿ. ಆಕೆಯನ್ನು ಮರೆತು ನಿಮ್ಮ ಬದುಕಿನತ್ತ ಗಮನ ಹರಿಸಿ.
-ಡಾ. ಸ್ಯಾಟಲೈಟ್
anekaby2@gmail.com