ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅತ್ಯಂತ ಪ್ರೀತಿಪಾತ್ರರು

Mainashree
Updated On : 15 May 2013, 12:41 pm

ಒಂದು ದಿನ ಅಧ್ಯಾಪಕಿಯೊಬ್ಬಳು ತನ್ನ ಪುಟಾಣಿ ವಿದ್ಯಾರ್ಥಿಗಳಿಗೆ ಹೀಗೆಂದು ಹೇಳಿದಳು: 'ನಾನೀಗ ಕರಿಹಲಗೆಯ ಮೇಲೆ ನಿಮ್ಮ ಹೆಸರುಗಳನ್ನು ಒಂದೊಂದಾಗಿ ಬರೆಯುತ್ತೇನೆ. ನಿಮ್ಮಲ್ಲಿ ಪ್ರತಿಯೊಬ್ಬರೂ, ನಿಮಗೆ ಅತ್ಯಂತ ಪ್ರೀತಿಪಾತ್ರರು ಯಾರು? ಯಾರಿಗೆ ನೀವು ಅತ್ಯಂತ ಕೃತಜ್ಞರಾಗಿದ್ದೀರಿ ಎಂಬುದನ್ನು ಹೇಳಬೇಕು. ಅವರ ಹೆಸರನ್ನು ನಾನು ನಿಮ್ಮ ಹೆಸರಿನ ಎದುರು ಬರೆಯುತ್ತೇನೆ.'
ಅಧ್ಯಾಪಕಿ ಒಬ್ಬ ಸಣ್ಣ ಹುಡುಗನ ಹೆಸರನ್ನು ಕರಿಹಲಗೆಯ ಮೇಲೆ ಬರೆದಾಗ ಆತ ಯೋಚನಾವುಗ್ನನಾದ. ಅವನ ಹೆಸರಿನ ಎದುರು ಏನು ಬರೆಯಬೇಕೆಂದು ಅಧ್ಯಾಪಕಿ ಕೇಳಿದಾಗ ಕೊನೆಗೊಮ್ಮೆ ಅವನು ಹೇಳಿದ 'ಅಮ್ಮ' ಎಂದು ಬರೆಯಿರಿ.
ಅಧ್ಯಾಪಕಿ ಹಾಗೆಯೇ ಬರೆದರು. ಅವರು ಮುಂದಿನ ವಿದ್ಯಾರ್ಥಿಯ ಹೆಸರನ್ನು ಬರೆಯುತ್ತಿರುವಾಗ ಆ ಸಣ್ಣ ಹುಡುಗ ತನ್ನ ಕೈಯನ್ನೆತ್ತಿ ಬಲವಾಗಿ ಅತ್ತಿತ್ತ ಆಡಿಸುವುದನ್ನು ನೋಡಿದರು.
'ಏನು?' ಎಂದು ಕೇಳಿದರು ಅಧ್ಯಾಪಕಿ.
'ದಯವಿಟ್ಟು 'ಅಮ್ಮ' ಎಂದು ಬರೆದದ್ದರ ಜತೆಗೆ ಇನ್ನೊಂದು ಹೆಸರು ಸೇರಿಸಿ' ಎಂದ ಹುಡುಗ.
ಮತ್ತೇನು ಬರೆಯಬೇಕು? ಎಂದು ಅಧ್ಯಾಪಕಿ ಕೇಳಿದಾಗ, ಆ ಹುಡುಗ ಹೇಳಿದ 'ಮತ್ತು ನಾಯಿ' ಎಂದು ಬರೆಯಿರಿ' ಎಂದ.
ಯಾಕಾಗಬಾರದು?  

-  ನಂದಿನಿ ಡಿ. ಕಾಮತ್
- ಮೂಲ: ಅಂತೋನಿ ಡಿಮೆಲ್ಲೊ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement