ಅಧಿಕಾರ
ಅಧಿಕಾರದಿಂದ ಅಹಂಕಾರದ ಆಗಮನ, ಅದೇ ಅಹಂಕಾರದಿಂದ ಅಧಿಕಾರದ ನಿರ್ಗಮನ.
- ಬಿ. ಸೋಮಶೇಖರ್, ಸುರಪುರ
ಅಧಿಕಾರದ ದಾಹ ಹೆಚ್ಚಾದರೆ ಅಧಃಪತನ ಆರಂಭವಾದಂತೆ.
- ನೇತ್ರಾವತಿ, ಪಾಂಡವಪುರ.
ದುಡಿಯುವ ಕೈಗಳಿಗೆ ಸೂಕ್ತ ಕೆಲಸ ಕೊಡದೆ, ಕೂತು ಉಣ್ಣುವ ಚಟ ಬೆಳೆಸುವ ಯೋಜನೆಗಳನ್ನು ಜಾರಿಗೆ ತರುವುದು ವೋಟ್
ಬ್ಯಾಂಕಿನ ರಾಜಕಾರಣ ಮತ್ತು ಅಧಿಕಾರದ ಲಾಲಸೆಯಲ್ಲದೇ ಮತ್ತೇನು?
- ಅರಳಕುಪ್ಪೆ ಶ್ರೀನಿವಾಸ
ಕೊಡುವವರೂ ಮತದಾರರೇ, ಕಿತ್ತುಕೊಳ್ಳುವವರೂ ಮತದಾರರೇ. ಎಚ್ಚರವಿರಲಿ ನೇತಾರರೇ...
- ಮಧು ಮಾಲ್ವೆ, ಸಾಗರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.