'ನಾನೇ ಯಾಕೇ?'
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಂತರಂಗ ಹವ್ಯಾಸಿ ನಾಟಕ ತಂಡ 32 ವರ್ಷಗಳಿಂದ ಕ್ರಿಯಾಶೀಲವಾಗಿದೆ. ಈಗ ಹವ್ಯಾಸಿಗಳಿಂದ ಮತ್ತೊಂದು ರಂಗಪ್ರಯೋಗ 'ನಾನೇ ಯಾಕೇ' ಸನ್ನದ್ಧವಾಗಿದೆ.
'ನಾನೇ ಯಾಕೇ' ನಾಟಕ ಮಾನವೀಯ ಸಂಬಂಧಗಳ ಬಗೆಗಿನ ಒಂದು ವಿಶ್ಲೇಷಣೆ. ಮಾನಸಿಕ ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳ ಅನಾವರಣ. ಸಾಹಿತಿ, ಡಾಕ್ಟರ್, ವಿದ್ಯಾರ್ಥಿ ಮತ್ತು ನಾಟಕಕಾರನ ಜೀವನದ ಘಟನೆಗಳ ಸುತ್ತ ಹೆಣೆದಿರುವ, ತಾಳ್ಮೆ, ಪ್ರೀತಿ, ನಂಬಿಕೆ, ವಿಶ್ವಾಸವಿದ್ದರೆ ಮಾತ್ರ ಬದುಕು ಸಾರ್ಥಕ ಎಂದು ಬಿಂಬಿಸುವ ನಾಟಕ. ಇದರ ರಚನೆ-ನಿರ್ದೇಶನ ಕಾಲೇಜು ವಿದ್ಯಾರ್ಥಿ ಎ.ಆರ್. ಅರ್ಜುನ್ ಅವರದು. ಟಿಕೆಟ್: 50 ರು. ಮಾಹಿತಿಗಾಗಿ ಅಂಕಲ್ ಶ್ಯಾಂ ಅವರನ್ನು 98809 14509 ಸಂಪರ್ಕಿಸಿ.
ದಿನಾಂಕ: 20.05.2013. ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ, ಬೆಂಗಳೂರು. ಸಮಯ: ಸಂಜೆ 7.30
---
ಪುಸ್ತಕಗಳ ಬಿಡುಗಡೆ
ನಾಲ್ವರು ಪತ್ರಕರ್ತೆಯರ ಪುಸ್ತಕ ಬಿಡುಗಡೆ ಮೇ 19ರಂದು ನಡೆಯಲಿದೆ. ಡಾ. ಚಂದ್ರಶೇಖರ ಕಂಬಾರ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಎನ್. ಶಾಂತಕುಮಾರ್, ಡಾ. ಸಂಧ್ಯಾ ಎಸ್. ಪೈ ಆಗಮಿಸಲಿದ್ದಾರೆ.
ದಿನಾಂಕ: 19 ಮೇ. 2013.
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು.
ಸಮಯ: ಬೆಳಗ್ಗೆ 10.30
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.