ಮೊಬೈಲ್ ಬಿಡಲಾಗುತ್ತಿಲ್ಲ
ನಾನು ಮೊಬೈಲ್ ಹೆಚ್ಚು ಬಳಸುತ್ತೇನೆ. ಮನೆಯಲ್ಲಿ ಬೈಯ್ತಾರೆ. ಆದರೂ ನನಗೆ ಮೊಬೈಲ್ ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಬಳಕೆ ಕಡಿಮೆ ಮಾಡುವ ವಿಧಾನ ತಿಳಿಸಿ.
- ಪವನ್ ಕಲಾಲ, ಶಿರಸಂಗಿ
ನೀವು ಮೊಬೈಲ್ ಗೀಳಿನಿಂದ ಬಳಲುತ್ತಿದ್ದೀರಿ. ಅರ್ಧ ಗಂಟೆಗೂ ಹೆಚ್ಚು ಸಮಯ ಮೊಬೈಲ್‌ನಲ್ಲಿ ಮಾತನಾಡಿದರೆ ಕಿವುಡುತನ ಬರಬಹುದು. ಇದರ ಅತಿ ಬಳಕೆ ನಪುಂಸಕತ್ವಕ್ಕೂ ಕಾರಣವಾಗಬಲ್ಲದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಎಲ್ಲ ತೊಂದರೆಗಳನ್ನು ತಂದುಕೊಳ್ಳುವುದಕ್ಕಿಂತ ಮೊಬೈಲ್ ಬಳಕೆ ಕಡಿಮೆ ಮಾಡುವುದು ಒಳ್ಳೆಯದಲ್ಲವೇ? ಒಮ್ಮೆ ಗಟ್ಟಿ ನಿರ್ಧಾರ ಮಾಡಿದರೆ ಇದು ಕಷ್ಟವೇನೂ ಅಲ್ಲ.